ಹೊಸಪೇಟೆ : ಮಧ್ಯಪ್ರಾಚ್ಯ ಯುದ್ಧ ಬಿಸಿ ಹಿನ್ನೆಲೆ ಕಮರ್ಷಿಯಲ್ ಸಿಲಿಂಡರ್‌ಗಳ ಅಭಾವ ಸೃಷ್ಟಿ ಆಗಿದ್ದಕ್ಕೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಶಾನಭಾಗ ಹೋಟೆಲ್ ಮಾಲೀಕ ಮಹೇಂದ್ರಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತಾಡಿ ಮಹೇಂದ್ರ ಕುಮಾರ್, ಪ್ರತಿ ದಿನಕ್ಕೆ ಹತ್ತು ಸಿಲಿಂಡರ್‌ಗಳು ಬೇಕಾಗ್ತಿತ್ತು. ಅದ್ರೆ ಇದೀಗ ಆರು ಸಿಲಿಂಡರ್ ಮಾತ್ರ ಸಿಕ್ತಿದೆ. ಸಿಲಿಂಡರ್ ಅಭಾವ ಆಗಿದ್ರಿಂದ ಹೋಟೆಲ್‌ನಲ್ಲಿ ಸಪ್ಲೈ ಮಾಡ್ತಿದ್ದ ಕೆಲವು ಐಟಂಗಳನ್ನ ಕಡಿಮೆ ಮಾಡಿದ್ದೇವೆ. ನಿತ್ಯ ಹದಿನಾರು ಐಟಂ ಗಳ ಪ್ರತಿದಿನ ಮಾಡುತ್ತಿದ್ದೀವಿ. ಇದೀಗ ಐದರಿಂದ ಆರು ಐಟಂ ಮಾತ್ರ ಮಾಡುತ್ತಿದ್ದೇವೆ. ಮಧ್ಯಾಹ್ನ ಊಟ ಕೂಡ ಸದ್ಯಕ್ಕೆ ಬಂದ್ ಮಾಡಿದ್ದೇವೆ. ಪ್ರತಿ ದಿನ ಹೋಟೆಲ್ ಪುಲ್ ರಶ್ ಆಗುತ್ತಿತ್ತು. ಆದರೆ ಐಟಂ ಕಡಿಮೆ ಮಾಡಿದಕ್ಕೆ ಗ್ರಾಹಕರಿಲ್ಲದೇ ಹೋಟೆಲ್ ಗಳು ಖಾಲಿ ಖಾಲಿ ಇದೆ ಅಂತ ಶಾನಭಾಗ ಹೋಟೆಲ್ ಮಾಲೀಕ ಮಹೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಶಾನಭಾಗ ಹೋಟೆಲ್ ಮುಂಭಾಗದಿಂದ ನಮ್ಮ ಪ್ರತಿನಿಧಿ ವಾಕ್ ಥ್ರೋ ಮಾಡೋದ್ರ ಜೊತೆಗೆ ಚಿಟ್ ಚ್ಯಾಟ್ ಮಾಡಿದ್ದಾರೆ ಬನ್ನಿ ನೋಡೋಣ.
PublicNext
11/03/2026 05:14 pm
LOADING...