ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ : ಲಕ್ಷ ಲಕ್ಷ ಬೆಲೆಬಾಳುವ ಪಡಿತರ ದಂಧೆಕೋರರ ಪಾಲು - ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಖಾಕಿ

ಹೊಸಪೇಟೆ : ವಿಜಯನಗರ ಜಿಲ್ಲೆಯಲ್ಲಿ ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಆಗ್ತಿರೋ ಘಟನೆ ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಪ್ರಕರಣ, ಹೊಸಪೇಟೆ ತಾಲೂಕಿನ ರೂರಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಕುಬಾಳ ಗ್ರಾಮ ಸೇರಿ ಎರಡು ಪ್ರಕರಣ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಕಾಕುಬಾಳ ಗ್ರಾಮದಲ್ಲಿ 2,10,388 ರೂಪಾಯಿ ಮೌಲ್ಯದ 6,080 ಕೆಜಿ ಪಡಿತರ, ಕೂಡ್ಲಿಗಿ ತಾಲೂಕಿನ ಕ್ಯಾಸನಕೆರೆ ಗ್ರಾಮದ ಬಳಿ ಲಾರಿಯಲ್ಲಿ ಸಾಗಿಸ್ತಿದ್ದ 4,10,400/- ಬೆಲೆ ಬಾಳುವ 18,240ಕೆಜಿ ವಶಕ್ಕೆ ಪಡೆದಿದ್ದಾರೆ. ಹೊಸಪೇಟೆ ತಾಲೂಕಿನ ಕಾಕುಬಾಳ ಗ್ರಾಮದಲ್ಲಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ರೆ, ಕೂಡ್ಲಿಗಿ ತಾಲೂಕಿನ ಕ್ಯಾಸನಕೆರೆ ಗ್ರಾಮದಲ್ಲಿ ಲಾರಿಯಲ್ಲಿ ಸಂಗ್ರಹಿಸಲಾಗಿತ್ತು. ಎರಡು ಪ್ರಕರಣಗಳಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.

Edited By : Nagaraj Tulugeri
PublicNext

PublicNext

11/03/2026 02:39 pm

Cinque Terre

6.49 K

Cinque Terre

0

ಸಂಬಂಧಿತ ಸುದ್ದಿ