ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೂಡ್ಲಿಗಿ: ನಕಲಿ ಬಂಗಾರದ ಆಮಿಷ : ಬಡವರ ಹಣ ಕಬಳಿಸಿದ ವಂಚಕರು ಅಂದರ್.!

ಕೂಡ್ಲಿಗಿ : ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಕಲಿ ಬಂಗಾರವನ್ನ ಅಸಲಿ ಬಂಗಾರ ಅಂತ ಮಾರಾಟ ಮಾಡಿ ಬಡ ಜನಕ್ಕೆ ವಂಚನೆ ಮಾಡ್ತಿದ್ದ ವಂಚಕರನ್ನ ಪೊಲೀಸರು ಹೆಡೆಮುಟ್ಟಿಸಿದ್ದಾರೆ. ಬಂಧಿತರನ್ನ ಸುರೇಶ್ @ ರಮೇಶ್ (32), ಸೋಮಣ್ಣ (40) ಅಂತ ಗುರುತಿಸಲಾಗಿದೆ. ಇಬ್ಬರೂ ಕೂಡ್ಲಿಗಿ ತಾಲೂಕಿನ ಕೊರಚರಹಟ್ಟಿ ಗ್ರಾಮದವರೆಂದು ಪತ್ತೆ ಹಚ್ಚಲಾಗಿದೆ.

ಕಾರ್ಯಾಚರಣೆ ವೇಳೆ ಬರೋಬ್ಬರಿ 29.50 ಲಕ್ಷ ನಗದು ವಶಕ್ಕೆ ಪಡೆದಿದ್ದಾರೆ. ಇಬ್ಬರೂ ಆರೋಪಿಗಳು ನಮ್ಮ ಒಂದು ಕೆಜಿ ಬಂಗಾರ ಇದೆ. ಅದನ್ನ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ ಅಂತ ಬಿ.ಕುಮಾರ್ ಅನ್ನೋ ವ್ಯಕ್ತಿಯನ್ನು ಕ್ಯಾಸನಕೆರೆ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಆತನಿಗೆ ಬೆದರಿಸಿ 3 ಲಕ್ಷ ಕಿತ್ತು ಪರಾರಿ ಆಗಿದ್ರು. ವಂಚನೆಗೆ ಒಳಗಾದ ವ್ಯಕ್ತಿ ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ ಠಾಣೆಗೆ ಭೇಟಿ ನೀಡಿ ದೂರು ನೀಡಿದ್ರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆಗೆ ಇಳಿದು ಮಾಲು, ನಗದು ಹಣ ಸಮೇತ ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣ ಭೇದಿಸಲು ಶ್ರಮಿಸಿದ ಸಿಬ್ಬಂದಿಗೆ ಎಸ್.ಪಿ ಜಾಹ್ನವಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Edited By :
Kshetra Samachara

Kshetra Samachara

21/03/2026 09:35 pm

Cinque Terre

280

Cinque Terre

0

ಸಂಬಂಧಿತ ಸುದ್ದಿ