ಹೊಸಪೇಟೆ : ಜಿಲ್ಲೆಯಲ್ಲಿ ಬಂದೋಬಸ್ತ್ ವಿಚಾರವಾಗಿ ವಿಜಯನಗರ ಎಸ್.ಪಿ ಜಾಹ್ನವಿ ರೌಡಿಗಳ ಪರೇಡ್ ನಡೆಸಿ ಬೆವರಿಳಿಸಿದ್ದಾರೆ. ಇದೇ ವೇಳೆ ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿ ಅಸಾದುಲ್‌ಗೆ ಎಸ್‌ಪಿ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಮೊದಲು ಸರಿಯಾಗಿ ನಿಲ್ಲುವುದು ಕಲಿ. ಯಾವುದೇ ಸಣ್ಣ ಕೇಸ್‌ನಲ್ಲಿ ಇರುವುದಲ್ಲ ನೀನು ಓವರ್ ಸ್ಮಾರ್ಟ್ ಆಗಿ ಆಡಬೇಡ. ಭಯೋತ್ಪಾದಕ ಕೃತ್ಯ ಆರೋಪದಲ್ಲಿ ಆರೋಪಿ ಅಸಾದುಲ್ಲಾಗೆ ಎಸ್‌ಪಿ ಎಸ್. ಜಾಹ್ನವಿ ಖಡಕ್ ವಾರ್ನ್ ಮಾಡಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ DAR ಗ್ರೌಂಡ್‌ನಲ್ಲಿ ನಡೆದ ರೌಡಿಗಳ ಪರೇಡ್‌ನಲ್ಲಿ ವಿಜಯನಗರ ಜಿಲ್ಲೆಯ 21 ಪೊಲೀಸ್ ಠಾಣೆಗಳ 220 ರೌಡಿಶೀಟರ್ ಗಳು ಭಾಗಿ ಆಗಿದ್ದರು. ಅಪರಾಧಿ ಚಟುವಟಿಕೆಗಳಿಂದ ದೂರ ಇರಬೇಕು. ಮತ್ತೇನಾದರೂ ಕಮಕ್ - ಕಿಮಕ್ ಅಂದು ಬಾಲ ಬಿಚ್ಚಿದರೆ ಕಟ್ ಮಾಡುತ್ತೇವೆ ಅಂತ ವಾರ್ನ್ ಮಾಡಿದರು. ಸುಧಾರಣೆ ಆಗದೇ ಚಟುವಟಿಕೆಗಳು ಮುಂದುವರೆದರೆ, ಇದಕ್ಕಿಂತ ಕಠಿಣ ಕ್ರಮ ಆಗುತ್ತದೆ ಅಂತಾ ಎಚ್ಚರಿಕೆ ನೀಡಿದರು ಸುಧಾರಣೆ ಆಗುವುದಕ್ಕೆ ಅವಕಾಶ ಪ್ರತಿದಿನ ಇರುತ್ತದೆ. ಒಳ್ಳೆಯ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಿ. ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬಾಳಬೇಕು ರೌಡಿಗಳಿಗೆ ಎಸ್‌ಪಿ ಎಸ್. ಜಾಹ್ನವಿ ನೀಡಿದರು.
PublicNext
18/03/2026 08:14 pm
LOADING...