ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಡಗಲಿ : ಸಿಡಿಲಿನ ಹಿಡಿತಕ್ಕೆ ರಸ್ತೆಯಲ್ಲೇ ಪ್ರಾಣ ಬಿಟ್ಟ ಯುವಕ - ಇನ್ನಿಬ್ಬರು ಬಚಾವ್

ಹಡಗಲಿ : ವಿಜಯನಗರ ಜಿಲ್ಲೆಯಲ್ಲಿ ರಾತ್ರಿ ವೇಳೆ ಸಿಡಿಲು - ಗುಡುಗು ಸಮೇತ ಮಳೆ ಸುರಿದಿದೆ. ಇದರಿಂದ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಕಂದಗಲ್ಲು ಗ್ರಾಮದಲ್ಲಿ ಸಿಡಿಲು ಬಡಿದು ಯುವಕನೋರ್ವ ಸಾವಿಗೀಡಾಗಿದ್ದಾನೆ. ಕಂದಗಲ್ಲು ಗ್ರಾಮದ ನಿವಾಸಿ ಪ್ರಶಾಂತ (22) ಸಿಡಿಲಿಗೆ ಬಲಿಯಾದ ಯುವಕ ಅಂತ ಗುರುತಿಸಲಾಗಿದೆ.

ಸಿಡಿಲು - ಗುಡುಗು ಸಮೇತ ಮಳೆ ಬರುತ್ತಿದ್ದ ವೇಳೆ ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಯುವಕ ಹೋಗುತ್ತಿದ್ದ. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತನ್ನೊಂದಿಗಿದ್ದ ಇಬ್ಬರು ಸ್ನೇಹಿತರಿಗೆ ಸಣ್ಣ ಪುಟ್ಟ ಸುಟ್ಟ ಗಾಯಗಳಾಗಿವೆ. ಗಾಯಾಳುಗಳು ವ್ಯಕ್ತಿಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಹೂವಿನ ಹಡಗಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
PublicNext

PublicNext

19/03/2026 11:31 am

Cinque Terre

7.71 K

Cinque Terre

0

ಸಂಬಂಧಿತ ಸುದ್ದಿ