ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆಯ ವಲಯ-1 ಮತ್ತು ವಲಯ-2ರ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸದ 81 ಆಸ್ತಿಗಳಿಂದ ಬಾಕಿ ಇರುವ ರೂ.1.94 ಕೋಟಿ ವಸೂಲಿ ಮಾಡುವ ಉದ್ದೇಶದಿಂದ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರ ನಿರ್ದೇಶನದಂತೆ ಇಂದು ಮಧ್ಯಾಹ್ನ 3:00 ಗಂಟೆಗೆ ಯಲಹಂಕ ಮಿನಿ ವಿಧಾನಸೌಧದ 3ನೇ ಮಹಡಿಯ ಸಭಾಂಗಣದಲ್ಲಿ ಹರಾಜು ಪ್ರಕ್ರಿಯೆ ಆಯೋಜಿಸಲಾಗಿತ್ತು.
ಈ ಹರಾಜು ಪ್ರಕ್ರಿಯೆಯನ್ನು ನಗರ ಪಾಲಿಕೆಯ ಅಪರ ಆಯುಕ್ತರು (ಕಂದಾಯ) ಹಾಗೂ ವಲಯ-1 ಮತ್ತು ವಲಯ-2ರ ಜಂಟಿ ಆಯುಕ್ತರು ಮತ್ತು ಉಪ ಆಯುಕ್ತರುಗಳ ಸಮ್ಮುಖದಲ್ಲಿ ನಡೆಸಲಾಯಿತು.
ಸಾಕಷ್ಟು ಅವಕಾಶಗಳಿದ್ದರೂ ಆಸ್ತಿ ತೆರಿಗೆ ಪಾವತಿಸದ ಸ್ವತ್ತುಗಳನ್ನು ಕಾಯ್ದೆ ಮತ್ತು ನಿಯಮಗಳ ಅನ್ವಯ ಹರಾಜು ಪ್ರಕ್ರಿಯೆಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗಿತ್ತು.
ಈ ಹರಾಜು ಪ್ರಕ್ರಿಯೆಯಲ್ಲಿ 5ಕ್ಕೂ ಹೆಚ್ಚು ಬಿಡ್ ದಾರರು ಭಾಗವಹಿಸಿದ್ದರು. ಆದರೆ ಯಾವುದೇ ಆಸ್ತಿಗೆ ಬಿಡ್ ಮಾಡಲು ಬಿಡ್ ದಾರರು ಮುಂದೆ ಬರದ ಕಾರಣ ಸದರಿ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಕಳೆದ ಮಾರ್ಚ್ 6 ರಂದು ಹರಾಜು ಪ್ರಕ್ರಿಯೆಯನ್ನು ಆಯೋಜಿಸಲಾಗಿತ್ತು. ಆಗಲೂ ಬಿಡ್ ದಾರರು ಯಾವುದೇ ಆಸ್ತಿಗೆ ಬಿಡ್ ಮಾಡದ ಕಾರಣ, ಹರಾಜನ್ನು ಮುಂದೂಡಲಾಗಿತ್ತು.
ಹರಾಜು ಪ್ರಕ್ರಿಯೆಗೆ ಇಡಲಾದ ಎಲ್ಲಾ ಆಸ್ತಿಗಳನ್ನು ನಗರ ಪಾಲಿಕೆಯ ವಶದಲ್ಲಿರಿಸಿ, ಮುಂದಿನ ದಿನಗಳಲ್ಲಿ ಹರಾಜು ಪ್ರಕ್ರಿಯೆಯನ್ನು ಮರು ಆಯೋಜಿಸಲಾಗುವುದು.
Kshetra Samachara
13/03/2026 09:01 pm
LOADING...