ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಗು ಬಸ್ ಹತ್ತೋವರೆಗೂ ರಕ್ಷಕನಂತೆ ಜೊತೆಯಲ್ಲೇ ಇರೋ ಶ್ವಾನ! ವಿಡಿಯೋ ವೈರಲ್ ....

ಉಡುಪಿ: ಪ್ರೀತಿಗೆ ಭಾಷೆಯ ಹಂಗಿಲ್ಲ ಎಂಬುವುದಕ್ಕೆ ಉಡುಪಿ ಜಿಲ್ಲೆಯ ಮುದರಂಗಡಿಯ ಈ ಘಟನೆ ಸಾಕ್ಷಿ.

ಹೌದು, ಸಂತ ಫ್ರಾನ್ಸಿಸ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಯೊಬ್ಬಳು ಪ್ರತಿದಿನ ಬೆಳಿಗ್ಗೆ ಬಸ್ ಹತ್ತಲು ಹೋಗುವಾಗ ಮನೆಯ ಶ್ವಾನವು ಮಗುವಿನ ಜೊತೆಯಲ್ಲೇ ಬರುತ್ತದೆ. ಮಗು ಬಸ್ ಹತ್ತಿದ ಮೇಲೆ ಬಸ್ ಮೆಟ್ಟಿಲಿನ ಮೇಲೆ ನಿಂತು ಮಗು ಸೀಟಿನಲ್ಲಿ ಕುಳಿತಿರುವುದನ್ನು ಖಚಿತಪಡಿಸಿಕೊಂಡ ನಂತರವೇ ಈ ಶ್ವಾನವು ಅಲ್ಲಿಂದ ಮರಳುತ್ತದೆ. ಈ ಶ್ವಾನದ ಕಾಳಜಿ ಮತ್ತು ಪ್ರೀತಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Edited By : Manjunath H D
PublicNext

PublicNext

14/03/2026 10:21 pm

Cinque Terre

24.33 K

Cinque Terre

2

ಸಂಬಂಧಿತ ಸುದ್ದಿ