ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ - ಶಾಸಕರೇ ಬಡವರ ಪಾಡೇನು ?

ಕುಂದಗೋಳ : ಗ್ರಾಮೀಣ ಭಾಗ ಕುಂದಗೋಳ ತಾಲೂಕು ಆಸ್ಪತ್ರೆಗೆ ಸೂಕ್ತ ಚಿಕಿತ್ಸೆ ಅರಸಿ ಬರುವ ರೋಗಿಗಳಿಗೆ ಔಷಧಿಗಳ ಅಭಾವ ತಲೆದೋರಿದ್ದು ಶಾಸಕ ಎಂ.ಆರ್.ಪಾಟೀಲ್ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ.

ಎಸ್.! ವೀಕ್ಷಕರೇ ಕುಂದಗೋಳ ಗ್ರಾಮೀಣ ಭಾಗದಲ್ಲಿ 100 ಹಾಸಿಗೆ ಸಾಮರ್ಥ್ಯಯುಳ್ಳ ತಾಲೂಕು ಆಸ್ಪತ್ರೆಗೆ ನಿತ್ಯ ನೂರಾರು ರೋಗಿಗಳು ಸೂಕ್ತ ಚಿಕಿತ್ಸೆ ಅರಸಿ ಬರುತ್ತಾರೆ. ಹೀಗೆ ಆಸ್ಪತ್ರೆ ದಾಖಲಾಗುವ ಒಳ ಮತ್ತು ಹೊರ ರೋಗಿಗಳಿಗೆ ನೀಡಲು ಕುಂದಗೋಳ ತಾಲೂಕು ಆಸ್ಪತ್ರೆಯಲ್ಲಿ ಹಲವು ಔಷಧಿಗಳ ಕೊರತೆ ಕಂಡು ಬಂದಿವೆ. ಕಪ್ ಸಿರಪ್, ಡೈಕ್ಲೋಜೆಲ್, ಐವಿ ಫ್ಲೂಯಿಡ್ಸ್, ಡ್ರಿಪ್ ಸೆಟ್ಸ್, ಓ,ಆರ್,ಎಸ್ ಸೇರಿದಂತೆ ಕೆಲ ಅವಶ್ಯ ಔಷಧಿಗಳ ಪೂರೈಕೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ವಿಳಂಬ ತಾಳಿದೆ, ಈ ಪರಿಣಾಮ ರೋಗಿಗಳು ಖಾಸಗಿ ಔಷಧಿ ಅಂಗಡಿಗಳಿಗೆ ತೆರಳುವ ದುಸ್ಥಿತಿ ಇದೆ.

ಸದ್ಯ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೂ ಔಷಧಿಗಳ ಕೊರತೆ ಬಗ್ಗೆ ಹೇಳಲು ಸಮರ್ಪಕ ಉತ್ತರ ಸಿಗದಾಗಿದೆ.

ಒಟ್ಟಾರೆ ಜಿಲ್ಲಾ ಆರೋಗ್ಯ ಇಲಾಖೆ, ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಬಡವರ ಸಂಜೀವಿನಿ ಸರ್ಕಾರಿ ಆಸ್ಪತ್ರೆಗೆ ಔಷಧಿ ಒದಗಿಸಬೇಕಿದೆ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/03/2026 02:25 pm

Cinque Terre

32.43 K

Cinque Terre

0

ಸಂಬಂಧಿತ ಸುದ್ದಿ