ಬೇಸಿಗೆಗಾಲ ಬಂದಾಗ ಜೀರ್ಣಕ್ರಿಯೆ ಸಮಸ್ಯೆಗಳು, ಹೊಟ್ಟೆ ಉಬ್ಬರ, ಆಮ್ಲೀಯತೆ ಮತ್ತು ಶೀತ-ಕೆಮ್ಮು ಮೊದಲಾದ ತೊಂದರೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಇಂತಹ ಸಮಯದಲ್ಲಿ, ಮನೆಯ ತೋಟದಲ್ಲೇ ಸುಲಭವಾಗಿ ಬೆಳೆಯುವ 'ಅಜ್ವೈನ ಎಲೆ' ಅಥವಾ 'ದೊಡ್ಡಪತ್ರೆ'ಯು ನೈಸರ್ಗಿಕ ಪರಿಹಾರವಾಗಿ ಉಪಯುಕ್ತವಾಗಿದೆ.
ಸಾಮಾನ್ಯವಾಗಿ 'ಓಮದ ಎಲೆ' ಎಂದೂ ಕರೆಯಲ್ಪಡುವ ಈ ಸುಗಂಧಯುಕ್ತ ಎಲೆಗಳು ಹಲವಾರು ಔಷಧೀಯ ಗುಣಗಳನ್ನು ಹೊಂದಿವೆ. ಬೇಸಿಗೆಗಾಲದಲ್ಲಿ ಎದುರಾಗುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲೇ ಸುಲಭವಾಗಿ ಲಭ್ಯವಿರುವ ಅಜ್ವೈನ್ ಎಲೆ ಅತ್ಯುತ್ತಮ ನೈಸರ್ಗಿಕ ಪರಿಹಾರವಾಗಿದೆ.
ಹೌದು ಹಿರಿಯರು ಹಿಂದಿನ ಕಾಲದಿಂದಲೂ ಹೊಟ್ಟೆ ನೋವು ಅಥವಾ ಅಜೀರ್ಣ ಉಂಟಾದಾಗ ಅಜ್ವೈನ್ ಎಲೆಯನ್ನು ಸೇವಿಸಲು ಸಲಹೆ ನೀಡುತ್ತಿದ್ದರು. ಅಜ್ವೈನ ಎಲೆ ಜೀರ್ಣಕ್ರಿಯೆಯನ್ನು ಸುಧಾರಿಸಿ, ಹೊಟ್ಟೆಯಲ್ಲಿನ ಗ್ಯಾಸ್ ಮತ್ತು ಉಬ್ಬರವನ್ನು ಕಡಿಮೆ ಮಾಡಲು ನೆರವಾಗುತ್ತದೆ ಎಂದು ಹೇಳಲಾಗುತ್ತದೆ. ಕೆಲವರು ಈ ಎಲೆಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಆಮ್ಲೀಯತೆ ಮತ್ತು ಹೊಟ್ಟೆಯ ಅಸಹಜತೆ ಕಡಿಮೆಯಾಗುತ್ತದೆ ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.
ಇದಷ್ಟೇ ಅಲ್ಲದೆ ಜೀರ್ಣಕ್ರಿಯೆಯ ಸಮಸ್ಯೆಗಳ ಜೊತೆಗೆ, ಶೀತ ಮತ್ತು ಕೆಮ್ಮು ಬಂದಾಗಲೂ ಅಜ್ವೈನ್ ಎಲೆ ಪರಿಣಾಮಕಾರಿ. ಗ್ರಾಮೀಣ ಪ್ರದೇಶಗಳಲ್ಲಿ ಜನರು, ಅಜ್ವೈನ್ ಎಲೆಯನ್ನು ಸ್ವಲ್ಪ ಬಿಸಿ ಮಾಡಿ ತಿನ್ನುವುದು ಅಥವಾ ಕಷಾಯ ಮಾಡಿ ಸೇವಿಸುವುದು ಗಂಟಲು ನೋವು ಮತ್ತು ಕೆಮ್ಮು ಕಡಿಮೆ ಮಾಡಲು ಸಹಕಾರಿ ಎಂದು ನಂಬುತ್ತಾರೆ.
ಮನೆಯಲ್ಲೇ ಸುಲಭವಾಗಿ ದೊರೆಯುವ ಈ ಸಸ್ಯವು ಹಲವರಿಗೆ ಆರೋಗ್ಯದ ಸಹಜ ನೆರವಾಗುತ್ತದೆ. ಆದ್ದರಿಂದ, ಬೇಸಿಗೆಯ ಸಮಯದಲ್ಲಿ ದೇಹವನ್ನು ಆರೋಗ್ಯಕರವಾಗಿಡಲು ಅಜ್ವೈನ ಎಲೆಯನ್ನು ಮಿತವಾಗಿ ಬಳಸುವುದು ಉತ್ತಮ ಎನ್ನವುದು ತಜ್ಞರು ಮಾತು.. ನಿಮ್ಮ ಮನೆಯಲ್ಲೂ ಈ ಸಸ್ಯ ಇದ್ರೆ ಪ್ರಯೋಜನೆ ಪಡೆಯುವುದನ್ನು ಮರೆಯಬೇಡಿ.
ಕೆಎಲ್‌ಇ ಕಾಲೇಜ್ ವಿದ್ಯಾರ್ಥಿನಿ ಹುಬ್ಬಳ್ಳಿ ರಾಧಿಕಾ ದೇಸಾಯಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/03/2026 11:34 am
LOADING...