ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬಾರದ ಪಶು ವೈದ್ಯರು.. ರೊಚ್ಚಿಗೆದ್ದ ರೈತರು..

ಧಾರವಾಡ: ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆಗೆ ವೈದ್ಯರು ಬರದೇ ಇದ್ದಿದ್ದರಿಂದ ರೊಚ್ಚಿಗೆದ್ದ ರೈತರು ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.ಉಪ್ಪಿನ ಬೆಟಗೇರಿಯ ಈ ಪಶು ಆಸ್ಪತ್ರೆಗೆ ಸುತ್ತಮುತ್ತಲ ಗ್ರಾಮಗಳ ರೈತರು ತಮ್ಮ ಜಾನುವಾರುಗಳನ್ನು ತೆಗೆದುಕೊಂಡು ಬರುತ್ತಾರೆ. ಆದರೆ, ಈ ಆಸ್ಪತ್ರೆಗೆ ವೈದ್ಯರೇ ಇಲ್ಲ. ಓರ್ವ ಸಿಬ್ಬಂದಿಯನ್ನು ಇಡಲಾಗಿದ್ದು, ಆ ಸಿಬ್ಬಂದಿ ಆಸ್ಪತ್ರೆಯ ಬೀಗವನ್ನೇ ತೆಗೆಯುವುದಿಲ್ಲ. ಇದರಿಂದ ಅನೇಕ ಜನ ರೈತರು ತಮ್ಮ ಜಾನುವಾರುಗಳನ್ನೇ ಕಳೆದುಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಮಂಗಳವಾರವೂ ಆಸ್ಪತ್ರೆಯ ಬೀಗ ತೆಗೆಯದೇ ಇದ್ದಿದ್ದರಿಂದ ರೊಚ್ಚಿಗೆದ್ದ ರೈತರು ಆಸ್ಪತ್ರೆಗೆ ಬೀಗ ಜಡಿದು ಪಶು ವೈದ್ಯಕೀಯ ಇಲಾಖೆಯ ಎಡಿ ಅವರು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಕೂಡ ಭೇಟಿ ನೀಡಿ ರೈತರ ಮನವೊಲಿಸುವ ಕೆಲಸ ಮಾಡಿದರು. ಆದರೆ, ರೈತರು ಮಾತ್ರ ತಮ್ಮ ಅಳಲು ತೋಡಿಕೊಂಡು ಈ ಪಶು ಆಸ್ಪತ್ರೆ ಸರಿಯಾಗಿ ಕಾರ್ಯನಿರ್ವಹಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ. ಸ್ಥಳಕ್ಕೆ ಎಡಿ ಅವರು ಬರಲೇಬೇಕು ಎಂದು ಪಟ್ಟು ಹಿಡಿದರು.ಡಾ.ಸುರೇಶ ಅರಕೇರಿ ಎಂಬುವವರಿಗೆ ಕೊಟ್ಟಬಾಗಿ ಪಶು ಆಸ್ಪತ್ರೆಯ ಜೊತೆಗೆ ಉಪ್ಪಿನ ಬೆಟಗೇರಿ ಪಶು ಆಸ್ಪತ್ರೆಯಲ್ಲೂ ಕರ್ತವ್ಯ ನಿರ್ವಹಿಸಲು ಹೆಚ್ಚುವರಿ ಕರ್ತವ್ಯ ವಹಿಸಲಾಗಿದೆ.

ಈ ಪಶು ವೈದ್ಯ ಸರಿಯಾಗಿ ಆಸ್ಪತ್ರೆಗೇ ಬರುವುದಿಲ್ಲ ರೈತರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ರೈತರು ಆರೋಪಿಸಿದರು. ಸ್ಥಳಕ್ಕೆ ಬಂದಿದ್ದ ಪಶು ಇಲಾಖೆ ಉಪನಿರ್ದೇಶಕ ಎಡಿ ಅವರು, ರೈತರನ್ನು ಸಮಾಧಾನಪಡಿಸಿ ಇನ್ಮುಂದೆ ಈ ರೀತಿ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರವೇ ರೈತರು ತಮ್ಮ ಪ್ರತಿಭಟನೆ ಕೈಬಿಟ್ಟರು.

Edited By : Manjunath H D
Kshetra Samachara

Kshetra Samachara

17/03/2026 10:04 pm

Cinque Terre

36.29 K

Cinque Terre

0

ಸಂಬಂಧಿತ ಸುದ್ದಿ