ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಯುಗಾದಿ ಪಾಡ್ಯದಂದು ಶ್ರೀರಾಮಲಿಂಗ ಕಾಮದೇವರ ಮರುಹುಟ್ಟು

ನವಲಗುಂದ: ಹೋಳಿ ಹಬ್ಬಕ್ಕೆ ವಿಶೇಷ ಮೆರಗನ್ನು ನೀಡಿದ ಇಲ್ಲಿನ ರಾಮಲಿಂಗ ಕಾಮದೇವರು ಹೋಳಿ ಸಂದರ್ಭದಲ್ಲಿ ದಹನವಾದ ನಂತರ ಮತ್ತೆ ಯುಗಾದಿ ಪಾಡ್ಯದಂದು ಮರುಹುಟ್ಟು ಪಡೆಯಲಿದ್ದು, (ನಾಳೆ)ಮಾರ್ಚ್ 19ರಂದು ಬಾಲ್ಯಾವಸ್ಥೆಯಲ್ಲಿ ಶ್ರೀ ರಾಮಲಿಂಗ ಕಾಮದೇವರ ಕುಳಿತ ಭಂಗಿಯಲ್ಲಿ ಮರು ಪ್ರತಿಷ್ಠಾಪನೆಯಾಗಲಿದೆ.

ಯುಗಾದಿ ಪಾಡ್ಯದಂದು ಬೆಳಿಗ್ಗೆ 6 ಗಂಟೆಗೆ ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀರಾಮಲಿಂಗ ಕಾಮದೇವರ ದರ್ಶನವು ಆ ದಿನ ರಾತ್ರಿ 10 ಗಂಟೆಯವರೆಗೆ ಲಭ್ಯವಿರಲಿದೆ. ಅಂದು ಕೂಡ ಸಾವಿರಾರು ಭಕ್ತರು ತಮ್ಮ ಇಷ್ಠಾರ್ಥ ಈಡೇರಿಕೆಗಾಗಿ ಬೆಳ್ಳಿ ಬಾಸಿಂಗ, ಬೆಳ್ಳಿ ತೊಟ್ಟಿಲು, ಬೆಳ್ಳಿ ಛತ್ರಿ ಸೇರಿದಂತೆ ಹಲವಾರು ಬೆಳ್ಳಿ ಪರಿಕರಗಳನ್ನು ಹರಕೆ ರೂಪದಲ್ಲಿ ಪಡೆಯುತ್ತಾರೆ. ಜತೆಗೆ ಹರಕೆ ತೀರಿದವರು ಪುನಃ ಒಂದರ ಜೊತೆ ಮತ್ತೊಂದು ಬೆಳ್ಳಿ ಪರಿಕರ ತಂದು ಕಾಮದೇವರಿಗೆ ಅರ್ಪಿಸುತ್ತಾರೆ.

ಇನ್ನೂ ಯುಗಾದಿ ಪಾಡ್ಯದಂದು ಬೆಳಗ್ಗೆ 6ರಿಂದ ರಾತ್ರಿಯವರೆಗೆ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ಅನ್ನ ಪ್ರಸಾದ ಸೇವೆಯನ್ನು ಏರ್ಪಡಿಸಲಾಗಿದೆ. ಮಧ್ಯರಾತ್ರಿ 12ಕ್ಕೆ ಸಕಲ ಪೂಜಾ ಕೈಂಕರ್ಯಗಳೊಂದಿಗೆ ಯುಗಾದಿ ಪಾಡ್ಯದ ಕಾಮದೇವರನ್ನು ತೆಗೆಯಲಾಗುವುದು.

- ಶಂಕರಯ್ಯ ಸುಭೇದಾರಮಠ, ಪಬ್ಲಿಕ್ ನೆಕ್ಸ್ಟ್ ನವಲಗುಂದ.

Edited By : Manjunath H D
Kshetra Samachara

Kshetra Samachara

18/03/2026 06:11 pm

Cinque Terre

59.71 K

Cinque Terre

1

ಸಂಬಂಧಿತ ಸುದ್ದಿ