ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: 15 ದಿನದ ಮಗುವಿಗೆ ತಂದೆಯಿಂದಲೇ ವಿಷಪ್ರಾಶನ…!

ಬೆಳಗಾವಿ: ಹೆತ್ತ ಮಗುವಿಗೆ ತಂದೆಯಿಂದಲೇ ವಿಷಪ್ರಾಶನ ಮಾಡಲಾಗಿದೆ ಎಂಬ ಆರೋಪ ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದಲ್ಲಿ ಕೇಳಿ ಬಂದಿದೆ.

ಪತ್ನಿ ಹಾಗೂ ಪತ್ನಿ ಪೋಷಕರಿಂದ ಪತಿಯ ಮೇಲೆ ಅನುಮಾನ ವ್ಯಕ್ತಪಡಿಸಲಾಗಿದೆ. 15 ದಿನಗಳ ಹಿಂದೆ ಜನಿಸಿದ್ದ ಮಗು ಪ್ರಿಯಾಂಕ ಏಕಾಏಕಿ ಸಾವನ್ನಪ್ಪಿದೆ.‌ ಹೆರಿಗೆ ಹಿನ್ನೆಲೆಯಲ್ಲಿ ತವರು ಮನೆಯಲ್ಲಿ ಮಗುವಿನ ತಾಯಿ ಶೀಲಾ ಇದ್ದಳು. ಪತ್ನಿ ಶೀಲಾ ಭೇಟಿಗೆ ಬಂದಿದ್ದ ಪತಿ ಭೀಮರಾಯ ಮನೆಯಿಂದ ತೆರಳಿದ ಕೆಲ ಹೊತ್ತಿನಲ್ಲಿ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ. ಭೀಮರಾಯನಿಂದಲೇ ಮಗುವಿಗೆ ವಿಷಪ್ರಾಶನವಾಗಿದೆ ಎಂದು ಪತ್ನಿ ಹಾಗೂ ಆಕೆಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.‌

ಪತಿ ಭೀಮರಾಯ ಸದ್ಯ ಎಸ್ಕೇಪ್ ಆಗಿದ್ದಾನೆ. ‌ಮೃತ ಮಗುವಿನ ಶವ ಬೆಳಗಾವಿ ಬಿಮ್ಸ್ ಗೆ ರವಾನಿಸಲಾಗಿದೆ.‌ ಸ್ಥಳಕ್ಕೆ ಬೆಳಗಾವಿ ಗ್ರಾಮೀಣ ಎಸಿಪಿ, ಕಾಕತಿ ಸಿಪಿಐ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತ ಮಗುವಿನ ಮರಣೋತ್ತರ ಪರೀಕ್ಷೆ ಬಳಿಕ ಸತ್ಯ ಬಹಿರಂಗವಾಗಲಿದೆ.

Edited By : Manjunath H D
PublicNext

PublicNext

18/03/2026 07:50 pm

Cinque Terre

21.59 K

Cinque Terre

4

ಸಂಬಂಧಿತ ಸುದ್ದಿ