ಧಾರವಾಡ: ಸಚಿವ ಜಮೀರ್ ಅಹ್ಮದ್ ಅವರ ವಿರುದ್ಧ ಆಗಾಗ ಹೇಳಿಕೆ ನೀಡುತ್ತಿರುವ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ಧಾರವಾಡ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಅವರು ತಿರುಗೇಟು ನೀಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿರುವ ತಮಟಗಾರ, ದಾವಣಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ನ್ನು ಕಾಂಗ್ರೆಸ್ ಅಭ್ಯರ್ಥಿಗೆ ನೀಡುವಂತೆ ನಾವು ಕೇಳುತ್ತಿದ್ದೇವೆ. ನಾವು ಕಾಂಗ್ರೆಸ್ ಪಕ್ಷದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದೇವೆ. ಟಿಕೆಟ್ ಕೊಡದೇ ಇದ್ದರೆ ಇದರ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ಸಚಿವ ಮಲ್ಲಿಕಾರ್ಜುನ ಅವರು ಜಮೀರ್ ಅಹ್ಮದ್ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಎಲ್ಲವನ್ನೂ ಬಾಯಿ ಮಾತಿನಲ್ಲಿ ಹೇಳಲು ಆಗುವುದಿಲ್ಲ. ಪ್ರಸಂಗ ಬಂದಾಗ ಚಾಟಿ ಬೀಸುತ್ತೇವೆ. ಯಾವಾಗ ಏನು ತೋರಿಸಬೇಕೋ ಅದನ್ನು ತೋರಿಸುತ್ತೇವೆ ಎಂದರು.
ಧಾರವಾಡ: ದಾವಣಗೆರೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಈ ಚುನಾವಣೆಯಲ್ಲಿ ಈ ಬಾರಿ ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಹುಬ್ಬಳ್ಳಿ ಹಾಗೂ ಧಾರವಾಡ ಅಂಜುಮನ್ ಸಂಸ್ಥೆಯ ಅಧ್ಯಕ್ಷರು ಮತ್ತು ಸದಸ್ಯರು ಒಕ್ಕೊರಲ ಆಗ್ರಹ ಮಾಡಿದ್ದಾರೆ.
ಈ ಕುರಿತು ಧಾರವಾಡದಲ್ಲಿ ಹುಬ್ಬಳ್ಳಿ ಅಂಜುಮನ್ ಸಂಸ್ಥೆ ವತಿಯಿಂದ ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಹಾಗೂ ಧಾರವಾಡ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದರು.ದಾವಣಗೆರೆಯಲ್ಲಿ 2.30 ಲಕ್ಷ ಮತಗಳಿವೆ. ಅದರಲ್ಲಿ 90 ಸಾವಿರ ಮುಸ್ಲಿಂ ಮತಗಳೇ ಇವೆ. ಉಳಿದಂತೆ ಲಿಂಗಾಯತ, ಕುರುಬ ಮತ್ತು ಇತರ ಮತಗಳಿವೆ.ಶಾಮನೂರು ಜಾತ್ಯಾತೀತ ನಾಯಕರಾಗಿದ್ದರು. ಅವರು ಎಲ್ಲ ಸಮಾಜದ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಅವರು ನಾನು ಇರುವವರೆಗೂ ಅದೇ ಸ್ಥಾನದಲ್ಲಿ ಸ್ಪರ್ಧೆ ಮಾಡುವ ಮಾತು ಹೇಳಿದ್ದರು. ಹೀಗಾಗಿ ಈಗ ನಮಗೆ ಆ ಕ್ಷೇತ್ರ ಬಿಟ್ಟು ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಆ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಬೆಂಗಳೂರು ಹೊರತುಪಡಿಸಿದರೆ ದಾವಣಗೆರೆ ಮತ ಕ್ಷೇತ್ರದಲ್ಲಿ ಒಳ್ಳೆಯದಿದೆ. ಹೀಗಾಗಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು. ಈಗ ಇರುವ ಕ್ಷೇತ್ರ ಖಾಲಿ ಇವೆ. ಟಿಕೆಟ್ ಯಾರು ಬೇಕಾದರೂ ಕೇಳಬಹುದು. ಆದರೆ ಪಕ್ಷ ಅಭಿಪ್ರಾಯ ಪಡೆದು ಟಿಕೆಟ್ ಕೊಡಲಿದೆ. ಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೊಡದೇ ಇದ್ದರೆ ನಾವೂ ಕೂಡಾ ಸಭೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ.ನಾವು ಪಕ್ಷ ಶಿಸ್ತಿನ ಸಿಪಾಯಿಗಳು.ಮುಂದೆ ಏನಾಗಲಿದೆ ಎಂದು ಕಾದು ನೋಡುತ್ತೇವೆ ಎಂದರು.
ನಾವು ಸಮಾಜದ ಕಾಳಜಿಯಿಂದ ಟಿಕೆಟ್ ಕೇಳುತ್ತಿದ್ದೇವೆ. ನಾವು ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡುತ್ತೇವೆ. ಟಿಕೆಟ್ ಕೊಡದೇ ಇದ್ದರೆ ಚರ್ಚೆ ಮಾಡುತ್ತೇವೆ. ಆಗು ಹೋಗು ಬಗ್ಗೆ ನಾವು ಚರ್ಚೆ ಮಾಡಿಲ್ಲ. ಮಲ್ಲಿಕಾರ್ಜುನ ಅವರು ಜಮೀರ್ ಬಗ್ಗೆ ಮಾತನಾಡಿದ್ದಾರೆ. ನಾವು ಎಲ್ಲವನ್ನೂ ಬಾಯಿ ಮಾತಿನಲ್ಲಿ ಹೇಳಲು ಬರೋದಿಲ್ಲ. ಪ್ರಸಂಗ ಬಂದಾಗ ಚಾಟಿ ತೋರಿಸುತ್ತೇವೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/03/2026 08:58 am