ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾಲಿಕೆ ಬಜೆಟ್ ಮಂಡನೆ - 1603.26 ಕೋಟಿ ರೂ. ಹಣದ ವಿವರಣೆ ನೀಡಿದ ಮೇಯರ್ ಜ್ಯೋತಿ ಪಾಟೀಲ್

ಹುಬ್ಬಳ್ಳಿ: ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 2026-27 ಬಜೆಟ್ ಮಂಡನೆ ಮಾಡಿದ್ದು, 1603.26 ಕೋಟಿ ರೂಪಾಯಿ ಹಣವನ್ನು ಬಜೆಟ್ ಮಂಡನೆ ಮಾಡಲಾಗಿದೆ. ಈ ಬಜೆಟ್ ನಿಂದ ಅವಳಿ ನಗರದ ಜನತೆಗೆ ಹೊರೆಯಾಗುವುದಿಲ್ಲ. ಉತ್ತಮವಾದ ಬಜೆಟ್ ನೀಡಿದ್ದೇವೆಂದು ಪಾಲಿಕೆ ಮೇಯರ್ ಜ್ಯೋತಿ ಪಾಟೀಲ್ ಹೇಳಿದರು.

ಮಾಧ್ಯಮದ ಜೊತೆ ಮಾತನಾಡಿದ ಅವರು, ಈ ಬಾರಿ ದೊಡ್ಡ ಗಾತ್ರದ ಬಜೆಟ್ ಮಂಡನೆ ಮಾಡಿದೆ. ಕುಡಿಯುವ ನೀರು, ‌ಮಹಿಳೆಯರ ಸಬಲೀಕರಣಕ್ಕೆ 82 ವಾರ್ಡ್‌ಗಳಲ್ಲಿ ಪಿಂಕ್ ಆಟೋಗಳನ್ನು ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.

ಕನ್ನಡ ಶಾಲೆಯಲ್ಲಿ ಕಲಿತು ಹೆಚ್ಚಿನ ಅಂಕ ಪಡೆಯುವ ಹೆಣ್ಣು ಮಕ್ಕಳಿಗೆ 25 ಸಾವಿರ ರೂ. ನೀಡಲಾಗುತ್ತದೆ. ಹೀಗೆ ಹಲವಾರು ಯೋಜನೆಗಳನ್ನು ಇಟ್ಟುಕೊಂಡು ಬಜೆಟ್ ಮಂಡನೆ ಮಾಡಿದ್ದೇವೆಂದು ಮೇಯರ್ ಜ್ಯೋತಿ ಪಾಟೀಲ್ ಅವರು ಮಾಹಿತಿ ನೀಡಿದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/03/2026 04:00 pm

Cinque Terre

25.67 K

Cinque Terre

0

ಸಂಬಂಧಿತ ಸುದ್ದಿ