ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಯುಗಾದಿಗೆ ಚಂದ್ರಮೌಳೇಶ್ವರನ ಸ್ಪರ್ಶಿಸಿದ ಸೂರ್ಯ ಕಿರಣಗಳು, ಕಣ್ತುಂಬಿಕೊಂಡ ಹುಬ್ಬಳ್ಳಿ ಭಕ್ತರು

ಹುಬ್ಬಳ್ಳಿ: ಯುಗಾದಿ ಹಿಂದೂಗಳ ವರ್ಷಾರಂಭದ ಮೊದಲ ಹಬ್ಬ. ಹಿಂದೂ ಪಂಚಾಗದ ಪ್ರಕಾರ ಹೊಸ ವರ್ಷದ ಹಿನ್ನೆಲೆಯಲ್ಲಿ ಅತ್ಯಂತ ಸಂಭ್ರಮ, ಸಡಗರದಿಂದ ಬೇವು-ಬೆಲ್ಲ ಸವಿದು ಬರಮಾಡಿಕೊಳ್ಳುವ ಹಬ್ಬ. ಯುಗಾದಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಂಭ್ರಮ ಕಳೆಕಟ್ಟುವಂತೆ ಮಾಡಿದೆ.

ಹುಬ್ಬಳ್ಳಿಯ ಐತಿಹಾಸಿಕ ಉಣಕಲ್‌ನ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಮುಂಜಾನೆಯ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸುವ ಘಳಿಗೆಯನ್ನು ಭಕ್ತರು ಕಣ್ಣು ತುಂಬಿಕೊಂಡರು. ಶತಮಾನಗಳಷ್ಟು ಹಳೆಯದಾದ ಚಂದ್ರಮೌಳೇಶ್ವರನ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳು ಈಡೇರುತ್ತೆ ಎಂಬ ನಂಬಿಕೆ ಇಲ್ಲಿನ ಭಕ್ತರಲ್ಲಿದೆ. ಈ ಹಿನ್ನೆಲೆಯಲ್ಲಿ ಯುಗಾದಿ ದಿನದಂದು ದೇವಸ್ಥಾನಕ್ಕೆ ಭೇಟಿ ನೀಡಿ ಸೂರ್ಯನ ಕಿರಣಗಳು ಶಿವಲಿಂಗ ಸ್ಪರ್ಶಿಸುವುದನ್ನು ನೋಡಿ ಜನ ಭಕ್ತಿಯಿಂದ ಸಂಭ್ರಮಿಸಿದರು.

12 ನೇ ಶತಮಾನದಲ್ಲಿ ಚಾಲುಕ್ಯರ ಕಾಲದಲ್ಲಿ ಈ ದೇವಸ್ಥಾನವನ್ನು ಕಟ್ಟಲಾಗಿದೆ. ಈ ದೇವಸ್ಥಾನದಲ್ಲಿ ಚತುರ್ಮುಖ ಶಿವಲಿಂಗವಿದ್ದು, ದೇವಸ್ಥಾನ ದ್ವಾರ ಬಾಗಿಲದ ಮೇಲಿರುವ ಕಿಂಡಿಗಳ ಮುಖಾಂತರ ಪ್ರತಿ ವರ್ಷ ಯುಗಾದಿ ಹಬ್ಬದಂದು ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಿತು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/03/2026 05:12 pm

Cinque Terre

35.21 K

Cinque Terre

0

ಸಂಬಂಧಿತ ಸುದ್ದಿ