ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಎಲ್.ಪಿ.ಜಿ. ಗ್ಯಾಸ್ ಹೊತ್ತ ವಾಹನದಲ್ಲಿ ಸೋರಿಕೆ - ಹೆದ್ದಾರಿಯಲ್ಲಿ ಮುಂಜಾಗ್ರತಾ ಕ್ರಮ ವಹಿಸಿದ ಖಾಕಿ

ಹುಬ್ಬಳ್ಳಿ: LPG ಅಭಾವದ ನಡುವೆಯೇ ಗ್ಯಾಸ್ ಸೋರಿಕೆಯಾಗಿದ್ದು, LPG ಗ್ಯಾಸ್ ಹೊತ್ತ ವಾಹನದಿಂದ ಅಪಾರ ಪ್ರಮಾಣದಲ್ಲಿ ಸೋರಿಕೆಯಾಗಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ‌.

ಗೂಟಿ-ಅಂಕೋಲಾ ರಸ್ತೆಯ ತಂಬೂರು ಕ್ರಾಸ್ ಬಳಿ ಸೋರಿಕೆಯಾಗಿದ್ದು, ನಿನ್ನೆಯಿಂದಲೇ ಸೋರಿಕೆಯಾಗುತ್ತಿದೆ. ಗ್ಯಾಸ್ ಸೋರಿಕೆ ಹಿನ್ನೆಲೆ ವಾಹನ ಓಡಾಟದಲ್ಲಿ ರಸ್ತೆ ಸಂಚಾರ ಬದಲಾವಣೆ ಮಾಡಲಾಗಿದೆ‌. ಕಲಘಟಗಿ ಯಲ್ಲಾಪುರ ರಸ್ತೆ ಮಾರ್ಗ ಬದಲಾವಣೆ ಮಾಡಲಾಗಿದೆ. ಹುಬ್ಬಳ್ಳಿ ತಡಸ ಕ್ರಾಸ್ ಮುಂಡಗೋಡ ಮಾರ್ಗವಾಗಿ ಸಂಚರಿಸುವಂತೆ ಸೂಚನೆ ನೀಡಿದೆ.

ಇನ್ನೂ‌ ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿಗೆ ಬರುವ ವಾಹನಗಳ ಸಂಚಾರವೂ ಬದಲಾಗಿದ್ದು, ಯಲ್ಲಾಪುರ ಹಳಿಯಾಳ ಕ್ರಾಸ್ ನಿಂದ ಧಾರವಾಡ ಹುಬ್ಬಳ್ಳಿ ಮಾರ್ಗವಾಗಿ ಬರಲು ಸೂಚನೆ ನೀಡಲಾಗಿದೆ. ವಾಹನಗಳ ಓಡಾಟಕ್ಕೆ ಸಂಪೂರ್ಣ ನಿಷೇಧ ಹೇರಿರುವ ಪೊಲೀಸರು,‌ ಯಾವುದೇ ವಾಹನ ಓಡಾಟ ಸೇರಿ ಜನರ ಸಂಚಾರಕ್ಕೆ ನಿಷೇಧ ಹೇರಿದ್ದಾರೆ.‌ ಗ್ಯಾಸ್ ಸೋರಿಕೆಯಾಗುತ್ತಿರುವ ಕಾರಣಕ್ಕೆ ಅನಾಹುತ ಆಗದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/03/2026 10:57 am

Cinque Terre

26.97 K

Cinque Terre

0

ಸಂಬಂಧಿತ ಸುದ್ದಿ