ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೇಲೆ ಭೀಕರ ಅಪಘಾತ !

ಹುಬ್ಬಳ್ಳಿ : ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಇಬ್ಬರು ಯುವಕರು ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ಬಳಿ ಮಲ್ಲಿಗವಾಡ ಬ್ರಿಡ್ಜ್ ಬಳಿ ಈ ರಸ್ತೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದವರು ಧಾರವಾಡ ತಾಲೂಕು ಲಕಮಾಪುರ ಗ್ರಾಮದ ಇಮಾಮಹುಸೇನ್ ಮಮ್ಮಿಗಟ್ಟಿ ಪ್ಲಾಟ್, ಇನ್ನೋರ್ವ ಅನಾಸ್ ಮುಲ್ಲಾನವರ ಲಕಮಾಪುರ ಎಂದು ತಿಳಿದು ಬಂದಿದೆ.

ರಸ್ತೆ ಅಪಘಾತ ಹೇಗೆ ಸಂಭವಿಸಿತು ಎಂಬ ಸಂಪೂರ್ಣ ಮಾಹಿತಿ ಪೊಲೀಸ್ ತನಿಖೆ ನಂತರವೇ ತಿಳಿಯಬೇಕಿದೆ. ರಸ್ತೆ ಅಪಘಾತ ಸಂಭವಿಸಿದ ಸ್ಥಳದಲ್ಲಿದ್ದ ಕೆ.ಆರ್‌.ಎಸ್‌ ಪಕ್ಷದ ತಾಲೂಕು ಅಧ್ಯಕ್ಷ ಮಂಜುನಾಥ ಹಿರೇಮಠ ಎಂಬ ಆಂಬ್ಯುಲೆನ್ಸ್'ಗೆ ಮಾಹಿತಿ ತಿಳಿಸಿ, ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ವಿವರ ನೀಡಿದ್ದಾರೆ.

ಈ ಘಟನೆ ಧಾರವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಅಪಘಾತಕ್ಕೆ ಸೂಕ್ತ ಕಾರಣ ತಿಳಿದು ಬರಬೇಕಿದೆ. ಸದ್ಯ ಗಂಭೀರ ಗಾಯಗೊಂಡು ಬೈಕ್ ಸವಾರರನ್ನು ಪೊಲೀಸರು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/03/2026 06:38 pm

Cinque Terre

32.71 K

Cinque Terre

1

ಸಂಬಂಧಿತ ಸುದ್ದಿ