ಬೆಂಗಳೂರು : ಬೀದಿ ಬದಿಯಲ್ಲಿದ್ದ ಹುಚ್ಚು ನಾಯಿ ದಾಳಿಯಿಂದ ಬಾಲಕಿ ಗಾಯಗೊಂಡಿದ್ದಾರೆ. ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಗೆ ಬಾಲಕಿ ದಾಖಲಾಗಿದ್ದಾಳೆ.
ಬಾಲಕಿ ಸೇರಿ ಇತರೆ ಇಬ್ಬರ ಮೇಲೆ ನಾಯಿ ಡೆಡ್ಲಿ ಅಟ್ಯಾಕ್ ಮಾಡಿದೆ. ಮನೆ ಒಳಗಡೆ ಓಡಿ ಬಾಗಿಲು ಹಾಕಿಕೊಂಡ ಜನರು ನಾಯಿ ದಾಳಿಗೆ ಮುಕ್ತಿ ಕೊಡಲು ಆಗ್ರಹಿಸಿದ್ದಾರೆ. ಲಗ್ಗೆರೆ ಬ್ರಿಡ್ಜ್ ಸಮೀಪ ನಿನ್ನೆ ರಾತ್ರಿ ನಡೆದ ಘಟನೆ ಅಂತ ತಿಳಿದು ಬಂದಿದೆ.
ಸ್ಥಳೀಯರು ದೂರು ಕೊಟ್ಟ ಬೆನ್ನಲ್ಲೇ ಸ್ಥಳಕ್ಕೆ ಬಂದ GBA ಸಿಬ್ಬಂದಿ ಹರ ಸಾಹಸ ಪಟ್ಟು ನಾಯಿಯನ್ನು ವಶಕ್ಕೆ ಪಡೆದ ಘಟನೆ ಬೆಳಕಿಗೆ ಬಂದಿದೆ.
PublicNext
21/03/2026 06:02 pm
LOADING...