`ಬೆಂಗಳೂರು: ಸಿಲಿಂಡರ್ ಬುಕ್ ಮಾಡಿದ್ರೂ ಖಾಲಿ ಆಗುತ್ತೆ ಎಂಬ ಆತಂಕದಲ್ಲಿದ್ದ ಗ್ರಾಹಕರು ಸಿಲಿಂಡರ್ ಬರ್ತಿದ್ದಂತೆ ಸಿಲಿಂಡರ್ ಗಾಡಿ ಬಳಿ ಓಡಿ ಬಂದಂತಹ ಘಟನೆ ಇಂದು ದೇವನಹಳ್ಳಿ ತಾಲ್ಲೂಕಿನ ಬೆಟ್ಟಕೋಟೆ ಗ್ರಾಮದಲ್ಲಿ ನಡೆದಿದೆ.
ಸಿಲಿಂಡರ್ ಗ್ಯಾಸ್ ಗಾಡಿ ಸುತ್ತಲೂ ಸಾರ್ವಜನಿಕರು ನೆರೆದು ಸಿಲಿಂಡರ್ ಖರೀದಿಗೆ ನಾ ಮುಂದು ತಾ ಮುಂದು ಅಂತಾ ಮುಗಿಬಿದ್ದರು.
ಸಿಲಿಂಡರ್ ಬುಕ್ ಮಾಡಿ ಇಪ್ಪತೈದು ದಿನಗಳಾದರೂ ಗ್ರಾಹಕರಿಗೆ ಪೂರೈಕೆ ಆಗಿರ್ಲಿಲ್ಲ. ಈಗ ಗ್ರಾಮಕ್ಕೆ ಸಿಲಿಂಡರ್ ಬರ್ತಿದ್ದಂತೆ ಸಿಲಿಂಡರ್ ಪಡೆಯಲು ಜನ ಮುಗಿ
ಬಿದ್ದರು. ಇನ್ನು ಕೆಲವರು ಬುಕ್ ಮಾಡಿದ್ರೂ ಸಿಲಿಂಡರ್ ಬಂದಿಲ್ಲ ಅಂತೇಳಿ ಬೇಸರದಿಂದ ವಾಪಸ್ ಹೋದರು. ಶೀಘ್ರವಾಗಿ ಗೃಹ ಬಳಕೆ ಸಿಲಿಂಡರ್ ಪೂರೈಸುವಂತೆ ಏಜೆನ್ಸಿ ಸಿಬ್ಬಂದಿಗೆ ಗ್ರಾಹಕರು ಮನವಿ ಮಾಡಿದರು.
Kshetra Samachara
21/03/2026 08:06 pm
LOADING...