ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ರೆಸಾರ್ಟ್‌ನ ಸಿಂಗಲ್ ಲೇಔಟ್‌ಗೆ 2 ವರ್ಷ ವಿಳಂಬ - ಧರಣಿಗೆ ರಘುಪತಿ ಭಟ್ ನಿರ್ಧಾರ

ಉಡುಪಿ: ತಮ್ಮ ರೆಸಾರ್ಟ್‌ಗೆ ಸಂಬಂಧಿಸಿದ ಸಿಂಗಲ್ ಲೇಔಟ್ ಮಂಜೂರಾತಿ ವಿಚಾರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ (UDA) ಕಳೆದ ಎರಡು ವರ್ಷಗಳಿಂದ ಅನಗತ್ಯ ವಿಳಂಬ ಮಾಡುತ್ತಿದೆ ಎಂದು ಮಾಜಿ ಶಾಸಕ ರಘುಪತಿ ಭಟ್ ತೀವ್ರ ಆರೋಪ ಮಾಡಿದ್ದಾರೆ.

ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಲೇ ಸಿಂಗಲ್ ಲೇಔಟ್ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಮಂಜೂರು ಮಾಡಲು ಸಾಧ್ಯವಿಲ್ಲವಾದರೆ, ಆ ಕುರಿತು ಸ್ಪಷ್ಟವಾಗಿ ಹಿಂಬರಹ ನೀಡಬೇಕು ಎಂದು ಭಟ್ ಒತ್ತಾಯಿಸಿದರು.

ಧರಣಿ ಸತ್ಯಾಗ್ರಹಕ್ಕೆ ಎಚ್ಚರಿಕೆ

ಈ ಬೇಡಿಕೆ ಈಡೇರುವವರೆಗೂ ಸುಮ್ಮನಿರುವುದಿಲ್ಲ ಎಂದು ಸ್ಪಷ್ಟಪಡಿಸಿದ ರಘುಪತಿ ಭಟ್, ಸೋಮವಾರದಿಂದ ನಗರ ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ರಾಜಕೀಯ ದ್ವೇಷದ ಆರೋಪ

ತಮ್ಮ ವೃತ್ತಿಜೀವನದ ಬಗ್ಗೆ ಮಾತನಾಡಿದ ರಘುಪತಿ ಭಟ್, "ನಾನು ಮೊದಲಿನಿಂದಲೂ ಉದ್ಯಮಿ. ರಾಜಕೀಯ ನನ್ನ ಪ್ರವೃತ್ತಿಯಾಗಿದ್ದರೆ, ಉದ್ಯಮ ನನ್ನ ವೃತ್ತಿ. ಕಳೆದ ಎರಡು ವರ್ಷಗಳಿಂದ ಉಡುಪಿ ಶಾಸಕರು ರಾಜಕೀಯ ದ್ವೇಷದಿಂದ ನನ್ನ ಸಿಂಗಲ್ ಲೇಔಟ್ ಮಂಜೂರಾತಿಯನ್ನು ವಿಳಂಬಗೊಳಿಸುತ್ತಿದ್ದಾರೆ," ಎಂದು ಆಪಾದಿಸಿದರು. ಈ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ನ್ಯಾಯಾಲಯದ ಮೊರೆ ಹೋಗಿಯೂ ಫಲ ಸಿಗದ ಕಾರಣ ಇದೀಗ ನ್ಯಾಯಕ್ಕಾಗಿ ಧರಣಿ ಮಾರ್ಗವನ್ನು ಅನುಸರಿಸುತ್ತಿರುವುದಾಗಿ ಅವರು ತಿಳಿಸಿದರು.

Edited By : Vinayak Patil
PublicNext

PublicNext

21/03/2026 08:11 pm

Cinque Terre

8.32 K

Cinque Terre

0

ಸಂಬಂಧಿತ ಸುದ್ದಿ