ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಈದುಲ್ ಫಿತ್ರ್ - ಯು.ಟಿ.ಖಾದರ್ ಈದ್ಗಾ ಮಸೀದಿ ನಮಾಝ್‌ನಲ್ಲಿ ಭಾಗಿ

ಮಂಗಳೂರು: ದ.ಕ.ಜಿಲ್ಲೆಯಾದ್ಯಂತ ಶುಕ್ರವಾರ ಸಂಭ್ರಮದ ಈದುಲ್ ಫಿತ್ರ್ ಹಬ್ಬ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು‌ ಮಂಗಳೂರಿನ ಬಾವುಟಗುಡ್ಡದಲ್ಲಿರುವ ಈದ್ಗಾ ಮಸೀದಿಯ ಸಾಮೂಹಿಕ ನಮಾಝ್‌ನಲ್ಲಿ ಭಾಗವಹಿಸಿದರು.

ಬಳಿಕ ಅವರು ಈದುಲ್ ಫಿತ್ರ್ ಸಂದೇಶ ನೀಡಿ, 'ಸರ್ವರಿಗೂ ಈದುಲ್ ಫಿತ್ರ್ ಹಬ್ಬದ ಶುಭಾಶಯ. ಪ್ರೀತಿ, ಸೋದರತೆ, ಸಹಬಾಳ್ವೆ, ಪರಸ್ಪರ ವಿಶ್ವಾಸ, ಅಭಿವೃದ್ಧಿಯ ಕರ್ನಾಟಕ, ಬಲಿಷ್ಠ ಭಾರತದ ನಿರ್ಮಾಣವೇ ನಮ್ಮ ಪ್ರತಿಯೊಂದು ಹಬ್ಬದ ಸಂದೇಶ. ಇದೇ ಸಂದೇಶವನ್ನು ಈದುಲ್ ಫಿತ್ರ್ ಹಬ್ಬದ ಸಂದರ್ಭ ನೀಡಲು ಬಯಸುತ್ತೇನೆ ಎಂದರು.

ಕರಾವಳಿಯಲ್ಲಿ ಇಂದು ಈದುಲ್ ಫಿತ್ರ್ ಹಬ್ಬ ಆಚರಣೆಯಾದರೆ, ಕರ್ನಾಟಕದ ಇತರಡೆ ನಾಳೆ ಹಬ್ಬ ಆಚರಣೆ ನಡೆಯಲಿದೆ. ಇಡೀ ವಿಶ್ವದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿ ಎಂಬುದೇ ನಮ್ಮ ಪ್ರಾರ್ಥನೆ. ಇಡೀ ವಿಶ್ವವೇ ಒಗ್ಗಟ್ಟಾಗಿ ಇರಬೇಕಾದ ಅವಕಾಶ ಆಗಬೇಕು. ವಿಶ್ವದ ಯಾವುದೇ ಪ್ರದೇಶದಲ್ಲಿ ಯುದ್ಧ ಸಂಭವಿಸಿದರೂ ಎಲ್ಲರೂ ಮಾನಸಿಕವಾಗಿ ನೋವು ಅನುಭವಿಸುವ ಸ್ಥಿತಿ ಇರುತ್ತದೆ. ಆದ್ದರಿಂದ ಇಡೀ ವಿಶ್ವದಲ್ಲೇ ಶಾಂತಿ ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಖಾದರ್ ಹೇಳಿದರು.

Edited By : Vinayak Patil
PublicNext

PublicNext

20/03/2026 10:32 am

Cinque Terre

13.29 K

Cinque Terre

0

ಸಂಬಂಧಿತ ಸುದ್ದಿ