ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗಿನಲ್ಲಿ ಅನಧಿಕೃತ ಬಡಾವಣೆ ವಿರುದ್ಧ ಜನ ಆಕ್ರೋಶ: ಪರಿಸರ ನಾಶಕ್ಕೆ ತಡೆ ಹಿಡಿಯಲು ಆಗ್ರಹ!

ಕೊಡಗು: ಕೊಡಗು ಜಿಲ್ಲೆಯ ವಿರಾಜಪೇಟೆ ಸಮೀಪದ ಬಾಳುಗೋಡುವಿನಲ್ಲಿ ನಡೆಯುತ್ತಿರುವ ಅನಧಿಕೃತ ಲಕ್ಸುರಿ ಬಡಾವಣೆ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಪರಿಸರ ರಕ್ಷಣಾ ಸಮಿತಿಯ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪರಿಸರ ನಾಶಕ್ಕೆ ಆತಂಕ ಮತ್ತು ಕ್ರಮಕ್ಕೆ ಆಗ್ರಹ

ಈ ಕುರಿತು ಮಾಹಿತಿ ನೀಡಿದ ಪರಿಸರ ರಕ್ಷಣಾ ಸಮಿತಿಯ ಮುಖಂಡ ಕರ್ನಲ್ ಚಪ್ಪುಡಿರ ಮುತ್ತಣ್ಣ, ಕೇರಳ ಮೂಲದ 'ಪಣಿಕ್ಕರ್ ಡೆವಲಪರ್ಸ್' ಸಂಸ್ಥೆಯು ಕೊಡಗಿನ ಸೂಕ್ಷ್ಮ ಪರಿಸರವನ್ನು ನಾಶ ಮಾಡುತ್ತಿದೆ ಎಂದು ಆರೋಪಿಸಿದರು. ಅನಧಿಕೃತವಾಗಿ ನಡೆಯುತ್ತಿರುವ ಈ ಲಕ್ಸುರಿ ಬಡಾವಣೆ ಕಾಮಗಾರಿಯನ್ನು ಜಿಲ್ಲಾಧಿಕಾರಿಗಳು ತಕ್ಷಣವೇ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು. ಅಲ್ಲದೆ, ಈ ಕಾಮಗಾರಿಗೆ ಅನುಮತಿ ನೀಡಿದ ಎಲ್ಲಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

Edited By : PublicNext Desk
Kshetra Samachara

Kshetra Samachara

26/03/2026 07:01 am

Cinque Terre

180

Cinque Terre

0

ಸಂಬಂಧಿತ ಸುದ್ದಿ