ಮಡಿಕೇರಿ: ಮಡಿಕೇರಿ ನಗರದ ಪುಟಾಣಿನಗರ ಪ್ರದೇಶದಲ್ಲಿ ಕೈಗೂಸಿನೊಂದಿಗೆ ಮಲಗಿದ್ದ ತಾಯಿಯ ಮೊಬೈಲ್ ಫೋನನ್ನು ತಡರಾತ್ರಿ ಮೂರುಗಂಟೆ ಸಮಯಕ್ಕೆ ದುಷ್ಕರ್ಮಿಗಳು ಕಿಟಕಿಯ ಮೂಲಕ ಕೈ ಹಾಕಿ ಕದ್ದೊಯ್ದ ಘಟನೆ ಬೆಳಕಿಗೆ ಬಂದಿದೆ.
ಮಮತ ಭರತ್ ಪೂಜಾರಿ ಎಂಬ ಮಹಿಳೆ ತಮ್ಮ ಎಳೆಯ ಮಗುವಿನೊಂದಿಗೆ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಕಿಟಕಿಯ ಮೂಲಕ ಕೈ ತೂರಿಸಿ ಮೊಬೈಲ್ ಫೋನ್ ಕದ್ದಿರುವ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮಮತ ಅವರ ತಂದೆ ಚಾರ್ಲಿ ಮತ್ತು ಪತಿ ಭರತ್ ಪೂಜಾರಿ ಈ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪುಟ್ಟ ಶಿಶುವಿನೊಂದಿಗೆ ನಿದ್ರಿಸುತ್ತಿದ್ದ ತಾಯಿಯ ಅಸಹಾಯಕ ಸ್ಥಿತಿಯ ಲಾಭ ಪಡೆದು ಕಳ್ಳತನ ನಡೆಸಿದ ಈ ಘಟನೆ ಜನಸಾಮಾನ್ಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನಗರ ಪ್ರದೇಶದಲ್ಲಿ ಇತ್ತೀಚೆಗೆ ಹೀಗೆ ಕಿಟಕಿ ಮೂಲಕ ಕಳ್ಳತನ ನಡೆಸುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರು ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಸೂಚಿಸಿದ್ದಾರೆ.
ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಮಡಿಕೇರಿ ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
PublicNext
01/04/2026 12:57 pm
LOADING...