ಸೋಮವಾರಪೇಟೆ: ಉತ್ತರ ಕೊಡಗಿನ ಸಂಪ್ರದಾಯಿಕ ಆಚರಣೆಯಲ್ಲಿ ಒಂದಾಗಿರುವ ಸೋಮವಾರಪೇಟೆ ತಾಲ್ಲೂಕಿನ ಕೂತಿನಾಡು ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವ ಏಪ್ರಿಲ್ ತಿಂಗಳ 6 ಸೋಮವಾರದಂದು ನಗರಳ್ಳಿಯ ಕಂಬತ್ತಳೆ ಬನದಲ್ಲಿ ನಡೆಯಲಿದೆ.
ಈ ಹಿನ್ನೆಲೆ ಸುಗ್ಗಿ ಆಚರಣೆಯ ಪ್ರಾರಂಭದ ದಿನವಾಗಿದ್ದು ದೇವಿಯ ತವರೂರು ಎಂದೇ ಕರೆಸಿಕೊಳ್ಳುವ ಕೂತಿ ಗ್ರಾಮದ ಚಾವಡಿ ಕಟ್ಟೆಯಲ್ಲಿ ಗ್ರಾಮದಲ್ಲಿನ ಬಂದೂಕುಗಳಿಗೆ ಗ್ರಾಮದ ಪ್ರಧಾನ ಅರ್ಚಕ ಅನಂತ ರಾಮ್ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು. ನಂತರ ಗ್ರಾಮಸ್ಥರು ದೇವರ ಕಟ್ಟೆಗೆ ಬಂದೂಕು ಹಿಡಿದು ಪ್ರದಕ್ಷಿಣೆ ಬಂದು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಸುಗ್ಗಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
PublicNext
30/03/2026 07:27 am
LOADING...