ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀ ಮುತ್ತಪ್ಪ 34 ನೇ ವರ್ಷದ ತೆರೆ ಮಹೋತ್ಸವ ಸಂಪನ್ನ

ವಿರಾಜಪೇಟೆ: ಶ್ರೀ ಮುತ್ತಪ್ಪನ್ ಮತ್ತು ಇತರ ದೈವಗಳ ವಾರ್ಷಿಕ ತೆರೆ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು.ವಿರಾಜಪೇಟೆ ಬಿಟ್ಟಂಗಾಲ ಕಂಪನಿಮೊಟ್ಟೆ ಗ್ರಾಮದ ಪ್ರಾರ್ಥನಾ ಮಡಪುರ ಶ್ರೀ ಮುತ್ತಪ್ಪ ದೇವಾಲಯದ 34 ನೇ ವರ್ಷದ ವಾರ್ಷಿಕ ತೆರೆ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು.ಗಣಪತಿ ಹೋಮದೊಂದಿಗೆ ತೆರೆ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಧ್ವಜಾರೋಹಣ ಬಳಿಕ ಸಮೀಪದ ಶ್ರೀ ಕಣ್ಣಂಬಾಡಿ ಅಮ್ಮ ಅವರಿಗೆ ಪೂಜೆ ಸಲ್ಲಿಸಲಾಯಿತು. ರಾತ್ರಿ 8 ಗಂಟೆಗೆ ಮುತ್ತಪ್ಪನ್ ವೆಳ್ಳಾಟಂ, ಗುಳಿಗನ್ ತೊಟ್ಟಂ ತೆರೆ, ನಡೆಯಿತು. ದೇವಾಲಯದ ಅನತಿ ದೂರದಲ್ಲಿ ಬಸುರಿಮಾಲ ದೇವರ ತೊಟ್ಟಂ ತೆರೆಯು ಮುಖ್ಯ ರಸ್ತೆಗಾಗಿ ದೇವಾಲಯಕ್ಕೆ ಆಗಮನವಾಯಿತು.ಮೆರವಣಿಗೆಯಲ್ಲಿ ನೂರಾರು ಭಕ್ತರು ಸೇರಿದಂತೆ ಮಹಿಳೆಯರು ಹಣತೆ ದೀಪದೊಂದಿಗೆ ಸ್ವಾಗತಿಸಿದರು. ಬಳಿಕ ದೇವಾಲಯದ ಆವರಣದಲ್ಲಿ ವಿಶೇಷ ಅನ್ನಸಂತರ್ಪಣೆ ನಡೆಯಿತು.

ಬಳಿಕ ಗುಳಿಗನ್ ತೆರೆ, ಶ್ರೀ ಮುತ್ತಪ್ಪನ್ ಶ್ರೀ ತಿರುವಪ್ಪನ್ ತೆರೆಗಳು ಆಕರ್ಷಕ ಬಸುರಿಮಾಲ ತೆರೆಯೊಂದಿಗೆ ವಾರ್ಷಿಕ ತೆರೆ ಮಹೋತ್ಸವ ಸಂಪನ್ನಗೊಂಡಿತ್ತು.ತೆರೆ ಮುಕ್ತಾಯ ಕಂಡು ಆಗಮಿಕ ಭಕ್ತರಿಗೆ ದೇಗುಲದ ವತಿಯಿಂದ ಅನ್ನಸಂತರ್ಪಣೆ ನಡೆಯಿತು ರಾತ್ರಿ ವಿಶೇಷ ಸಿಡಿಮದ್ದು ಪ್ರದರ್ಶನ ಭಕ್ತರ ಮನಸೂರೆಗೊಂಡಿತ್ತು.

Edited By : PublicNext Desk
Kshetra Samachara

Kshetra Samachara

04/04/2026 07:01 am

Cinque Terre

120

Cinque Terre

0

ಸಂಬಂಧಿತ ಸುದ್ದಿ