ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿರಾಜಪೇಟೆಯಲ್ಲಿ ಕೇಸರಿ ಸಂಭ್ರಮ: ಹನುಮ ಜಯಂತಿ ಶೋಭಾಯಾತ್ರೆಗೆ ಜನಸ್ತೋಮ!

ವಿರಾಜಪೇಟೆ: ವಿರಾಜಪೇಟೆ ಯಲ್ಲಿ ಹನುಮ ಜಯಂತಿ ಕಾರ್ಯಕ್ರಮ ಆಯೋಜನೆಗೊಂಡಿದ್ದು ಬಹಳ ಅದ್ದೂರಿಯಾಗಿ ಕಾರ್ಯಕ್ರಮ ಜರುಗಿತು.

ಹನುಮ ಜಯಂತಿ ಅಂಗವಾಗಿ ವಿರಾಜಪೇಟೆ ಪಟ್ಟಣ ಕೇಸರಿಮಯವಾಗಿದ್ದು ಎಲ್ಲಿ ನೋಡಿದರೂ ಕೇಸರಿ ಧ್ವಜ ಬಂಟಿಂಗ್ಸ್ ಗಳು ರಾರಾಜಿಸುತ್ತಿದ್ದವು. ವಿರಾಜಪೇಟೆಯ ಮಾರಿಯಮ್ಮ ದೇವಾಲಯದಿಂದ ಆರಂಭವಾದ ಬೃಹತ್ ಶೋಭಾಯಾತ್ರೆ ತಾಲ್ಲೂಕು ಮೈದಾನದವರೆಗೂ ಸಾಗಿದ್ದು ತಾಲ್ಲೂಕು ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಿತು.

ಇನ್ನೂ ಶೋಭಾಯಾತ್ರೆಯ ಹಿನ್ನೆಲೆ ಕಲಾತಂಡಗಳ ಸಾಥ್ ನೀಡಿದ್ದು ಚಂಡೆ ಮದ್ದಳೆ,ಕೊಡಗಿನ ಸಾಂಪ್ರದಾಯಿಕ ನೃತ್ಯ ಮಂಟಪಗಳು ಜನರ ಕಣ್ಮನ ಸೆಳೆಯಿತು. ಹನುಮ ಜಯಂತಿ ಅಂಗವಾಗಿ ನೂರಾರು ಹಿಂದೂ ಬಾಂಧವರು ಸೇರಿದ್ದು ವಿವಿಧ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Edited By : PublicNext Desk
Kshetra Samachara

Kshetra Samachara

03/04/2026 07:17 am

Cinque Terre

340

Cinque Terre

0

ಸಂಬಂಧಿತ ಸುದ್ದಿ