ಧಾರವಾಡ: ಹುಬ್ಬಳ್ಳಿ ಧಾರವಾಡ ಅವಳಿ ನಗರದ ನವಲೂರು ಎಂದಾಕ್ಷಣ ನೆನಪಾಗುವುದು ರಸ್ತೆ ಮಧ್ಯೆ ಇರೋ ಪೇರಲ ಹಣ್ಣುಗಳು... ಧಾರವಾಡಕ್ಕೆ ಬಂದವರು ನವಲೂರಿನ ಫೇಮಸ್ ಪೇರಲ ಹಣ್ಣು ಸವಿಯದೆ ಮುಂದೆ ಹೋಗುವುದಿಲ್ಲ. ರುಚಿಗೆ ಅಷ್ಟೊಂದು ಫೇಮಸ್ ಈ ನವಲೂರು ಪೇರಳೆ ಹಣ್ಣು.
ಹೌದು! ಮಾರುಕಟ್ಟೆಯಲ್ಲಿ ಸಿಗುವ ಪೇರಲ ಹಣ್ಣುಗಳ ರುಚಿಗೂ ಧಾರವಾಡ ನವಲೂರಿನ ಭೂಮಿಯಲ್ಲಿ ಬೆಳೆದಿರುವ ಪೇರಲ ಹಣ್ಣಿನ ರುಚಿಗೂ ಬಹಳ ವ್ಯತ್ಯಾಸವಿದೆ. ಹಣ್ಣಿನ ಪ್ರಿಯರ ಕಣ್ಣು ಯಾವಾಗಲೂ ನವಲೂರಿನ ಪೇರಲ ಹಣ್ಣಿನ ಮೇಲಿರುತ್ತದೆ.
ಪೇರಲ ಹಣ್ಣಿನಲ್ಲಿ ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಜ್ವರ, ಕೆಮ್ಮು ಮುಂತಾದ ಸೋಂಕುಗಳಿಂದ ರಕ್ಷಿಸುತ್ತದೆ. ಕಣ್ಣುಗಳಿಗೂ ರಕ್ಷಣೆ ನೀಡುವ ಪೇರಲ ಹಣ್ಣಿನಲ್ಲಿ ವಿಟಮಿನ್ ಎ ಪ್ರಮಾಣವು ಇದೆ. ಅಷ್ಟೇ ಅಲ್ಲದೆ ಚರ್ಮವನ್ನು ಕಂಗೊಳಿಸುವಂತೆ ಮಾಡುತ್ತದೆ. ಇದರಲ್ಲಿ ನಾರಿನಾಂಶ (Fiber) ಜೀರ್ಣಕ್ರಿಯೆಯನ್ನು ಸುಧಾರಿಸಿ ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಫೇಮಸ್ ಆಗಿರುವ ಪೇರಲ ಹಣ್ಣಿಗೆ ಬಹಳಷ್ಟು ಬೇಡಿಕೆ ಹೆಚ್ಚಿದೆ. ನವಲೂರಿನ ಜನ ತಮ್ಮ ಜಮೀನಿನಲ್ಲಿ ಬೆಳೆದ ಪೇರಲ ಹಣ್ಣುಗಳನ್ನು ತಾವೇ ಮಾರಾಟ ಮಾಡುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.
ಇನ್ನು ಸುಲಭವಾಗಿ ದೊರೆಯುವ ಪೇರಲ ಹಣ್ಣು ದೈನಂದಿನ ಆಹಾರದಲ್ಲಿ ಸೇರಿಸಿದರೆ ಆರೋಗ್ಯಕರ ಜೀವನಕ್ಕೆ ಉತ್ತಮ ಸಹಾಯಕವಾಗುತ್ತದೆ ಇದು ಪೌಷ್ಟಿಕ ಹಣ್ಣು ಮಧುಮೇಹಗಳಿಗೆ ಸಹಕಾರಿಯಾಗುತ್ತದೆ, ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೃದಯ ಆರೋಗ್ಯಕ್ಕೆ ಉಪಯುಕ್ತವಾಗಿದ್ದು, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಹೀಗಾಗಿ ಈ ಮಾರ್ಗದಲ್ಲಿ ಹೋಗುವ ಪ್ರವಾಸಿಗರು ನವಲೂರಿನ ಹಣ್ಣು ಸವಿಯದೆ ಹೋಗುವುದಿಲ್ಲ.
ವರದಿ: ಮಂಜುನಾಥ ಕವಳಿ ಪಬ್ಲಿಕ್ ನೆಕ್ಸ್ಟ್ ಧಾರವಾಡ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/03/2026 05:02 pm
LOADING...