ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಜನವಸತಿ ಪ್ರದೇಶಕ್ಕೆ ಕಾಡುಪ್ರಾಣಿಗಳ ಲಗ್ಗೆ - ಆತಂಕ ವ್ಯಕ್ತಪಡಿಸಿದ ಶಾಸಕ ತಮ್ಮಯ್ಯ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಇತ್ತೀಚೆಗೆ ಕಾಡು ಪ್ರಾಣಿಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರು ಆತಂಕದ ನೆರಳಿನಲ್ಲಿ ಬದುಕುವಂತಾಗಿದೆ. ಮಲೆನಾಡು ಪ್ರದೇಶದಲ್ಲಿ ಸದಾ ಕಾಡಾನೆಗಳ ದಂಡು ರೈತರ ನಿದ್ದೆಗೆಡಿಸುತ್ತಿದ್ದರೆ, ಇನ್ನೊಂದೆಡೆ ಬಯಲು ಸೀಮೆಯ ಅಂಚಿನಲ್ಲಿ ಚಿರತೆಗಳ ಭಯ ಜನರನ್ನು ಹೈರಾಣಾಗಿಸಿದೆ. ಹೀಗಿರುವಾಗಲೇ ಅನಿರೀಕ್ಷಿತ ಎಂಬಂತೆ ಚಿಕ್ಕಮಗಳೂರು ನಗರದ ಹೃದಯಭಾಗಕ್ಕೆ ಕರಡಿಯೊಂದು ಲಗ್ಗೆ ಇಟ್ಟಿರುವುದು ನಗರವಾಸಿಗಳಲ್ಲಿ ತೀವ್ರ ದಿಗಿಲು ಮೂಡಿಸಿದೆ.

ನಗರದ ಎಂ.ಜಿ. ರಸ್ತೆ ಮತ್ತು ಜನನಿಬಿಡ ಬಸ್ ನಿಲ್ದಾಣದ ಆಸುಪಾಸಿನಲ್ಲಿ ಕರಡಿ ಸದ್ದಿಲ್ಲದೆ ಓಡಾಡುತ್ತಿರುವ ದೃಶ್ಯಗಳು ಕಂಡುಬಂದಿದ್ದು, ಜನರು ರಸ್ತೆಗೆ ಇಳಿಯಲು ಭಯಪಡುವಂತಾಗಿದೆ. ಜನವಸತಿ ಪ್ರದೇಶಕ್ಕೆ ಕಾಡುಪ್ರಾಣಿಗಳು ಹೀಗೆ ನುಗ್ಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಶಾಸಕ ತಮ್ಮಯ್ಯ ಕಾಡು ಪ್ರಾಣಿಗಳ ಉಪಟಳವನ್ನು ತಡೆಯಲು ಅರಣ್ಯ ಇಲಾಖೆ ತಕ್ಷಣವೇ ಎಚ್ಚೆತ್ತುಕೊಳ್ಳಬೇಕು ಹಾಗೂ ನಗರ ಮತ್ತು ಗ್ರಾಮಗಳಿಗೆ ಬರದಂತೆ ತಡೆಯಲು ವೈಜ್ಞಾನಿಕ ಹಾಗೂ ಶಾಶ್ವತ ಕ್ರಮಗಳನ್ನು ಅರಣ್ಯ ಅಧಿಕಾರಿಗಳು ತುರ್ತಾಗಿ ಕೈಗೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.

Edited By : Manjunath H D
PublicNext

PublicNext

02/04/2026 07:06 pm

Cinque Terre

13.57 K

Cinque Terre

0

ಸಂಬಂಧಿತ ಸುದ್ದಿ