ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜನಗಣತಿ ಕಾರ್ಯಕ್ಕೆ ನೇಮಿಸಲಾದ ಸಿಬ್ಬಂದಿಯ ತರಬೇತಿ ಕಾರ್ಯ ಪರಿಶೀಲಿಸಿದ ರಾಜೇಂದ್ರ ಚೋಳನ್

ಬೆಂಗಳೂರು: ಭಾರತದ ಜನಗಣತಿ-2027 ಕುರಿತಂತೆ ಜನಗಣತಿ ಕಾರ್ಯಕ್ಕೆ ನೇಮಿಸಲಾದ ಸಿಬ್ಬಂದಿಯ ತರಬೇತಿಗೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 6 ವಿಧಾನಸಭಾ ಕ್ಷೇತ್ರದ 6 ಕೇಂದ್ರಗಳಲ್ಲಿ ತರಬೇತಿ ಕಾರ್ಯ ಹಮ್ಮಿಕೊಳ್ಳಲಾಗಿದೆ.

ಚಾಮರಾಜಪೇಟೆಯ ಆದರ್ಶ ಕಾಲೇಜು ಹಾಗೂ ಚಿಕ್ಕಪೇಟೆ ಕ್ಷೇತ್ರದ ಜಯನಗರದ 2ನೇ ಬ್ಲಾಕ್ ನಲ್ಲಿರುವ ಕಮ್ಯುನಿಟಿ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಕಾಲೇಜಿಗೆ ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ರವರು ಭೇಟಿ ನೀಡಿ ತರಬೇತಿಗೆ ಕೈಗೊಂಡ ಸಿದ್ಧತೆ ಹಾಗೂ ತರಬೇತಿ ನಡೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ರವರು, ಕಂದಾಯ ಅಪರ ಆಯುಕ್ತರಾದ ಕೆ. ರಂಗನಾಥ್, ಜಂಟಿ ಆಯುಕ್ತರಾದ ಹೇಮಂತ್ ಶರಣ್ ಹಾಜರಿದ್ದರು.

ಆಯಾ ವಿಭಾಗಗಳ ಕಂದಾಯ ಅಧಿಕಾರಿಗಳು, ಕಾರ್ಯಪಾಲಕ ಇಂಜಿನಿಯರ್‌ಗಳು ತರಬೇತಿ ಕೇಂದ್ರಗಳ ಉಸ್ತುವಾರಿ ನಿರ್ವಹಿಸುತ್ತಿದ್ದಾರೆ.

Edited By : Vinayak Patil
PublicNext

PublicNext

06/04/2026 10:31 pm

Cinque Terre

16.87 K

Cinque Terre

0

ಸಂಬಂಧಿತ ಸುದ್ದಿ