ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಡರಾತ್ರಿವರೆಗೂ ಸರದಿ ಸಾಲಿನಲ್ಲಿ ನಿಂತು ಗ್ಯಾಸ್ ತುಂಬಿಸಿಕೊಂಡ ಆಟೋ ಚಾಲಕರು

ಬೆಂಗಳೂರು : ಮೂರು ದಿನಗಳ ನಂತರ ಗ್ಯಾಸ್ ಸ್ಟಾಕ್ ಬಂದ ಹಿನ್ನೆಲೆ ಗ್ಯಾಸ್ ತುಂಬಿಸಿಕೊಳ್ಳಲು ಆಟೋ ಚಾಲಕರು ಮುಗಿಬಿದ್ದಿದ್ದಾರೆ.

ದೊಡ್ಡಬಳ್ಳಾಪುರ ನಗರದಲ್ಲಿರುವ ವೀರಭದ್ರಸ್ವಾಮಿ ಆಟೋ ಗ್ಯಾಸ್ ಬಂಕ್ ಮುಂದೆ ಸರದಿ ಸಾಲಿನಲ್ಲಿ ತಡರಾತ್ರಿವರೆಗೂ ನಿಂತು ಆಟೋ ಚಾಲಕರು ಗ್ಯಾಸ್ ತುಂಬಿಸಿಕೊಂಡಿದ್ದಾರೆ.

ಪೊಲೀಸ್ ಭದ್ರತೆಯಲ್ಲಿ ಪ್ರತಿ ಆಟೋಗೆ 500 ರೂ. ಗೆ ಗ್ಯಾಸ್ ವಿತರಣೆ ಮಾಡಲಾಗಿದೆ.ಹೀಗಾಗಿ ಆಟೋ ಚಾಲಕರು ಕೇವಲ 500ರೂಗೆ ಗ್ಯಾಸ್ ವಿತರಿಸಿದರೆ ನಮಗೆ ಬಾಡಿಗೆ ಗೆ ಆಟೋ ಓಡಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಮೂರು ದಿನಗಳ ನಂತರ ಗ್ಯಾಸ್ ಸ್ಟಾಕ್ ಬಂದಿದೆ. ದುಡಿದು ನಾವು ಜೀವನ ಸಾಗಿಸೋದು ಹೇಗೆ ಎಂದು ಆಟೋ ಚಾಲಕರು ಅಳಲು ತೋಡಿಕೊಂಡಿದ್ದು,ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಆಟೋ ಚಾಲಕರ ಒತ್ತಾಯಿಸಿದ್ದಾರೆ.

Edited By :
PublicNext

PublicNext

07/04/2026 05:28 pm

Cinque Terre

3.77 K

Cinque Terre

0

ಸಂಬಂಧಿತ ಸುದ್ದಿ