ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : ರಾಜಕೀಯಕ್ಕೆ ಬರ್ತಾರಾ ಪೊಲೀಸ್ ಇಲಾಖೆಯ ಡಿಐಜಿಪಿ ದೇವರಾಜ್?!

ಕೋಲಾರ : ಇಂದು ಕೋಲಾರದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ 135ನೇ ಜಯಂತಿಯನ್ನ ಅದ್ದೂರಿಯಾಗಿ ಆಚರಿಸಲು ಜಿಲ್ಲಾಡಳಿತ ಸಜ್ಜಾಗಿದೆ.

ಕೋಲಾರ ನಗರದ ಮುಖ್ಯ ರಸ್ತೆಯಲ್ಲಿ ಜಯಂತಿಗೆ ಶುಭಕೋರುವ ಬ್ಯಾನರ್ ಬಂಟಿಂಗ್ಸ್ ಗಳು ರಾರಾಜಿಸುತ್ತಿದೆ, ರಸ್ತೆ ಮಧ್ಯೆ ಹಾಕಿರುವ ಬ್ಯಾನರ್ ಗಳಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಡಿ.ಐ.ಜಿ.ಪಿ ದೇವರಾಜ್ ಅವರ ಫೋಟೋಗಳನ್ನ ಹಾಕಿಸಲಾಗಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ದೇವರಾಜ್ ಅವರು ಸ್ಪರ್ಧೆಗೆ ಸಜ್ಜಾಗುತ್ತಿದ್ದಾರೆ ಎನ್ನಲಾಗುತ್ತಿದೆ,

ಈಗಾಗಲೇ ಕೋಲಾರದಲ್ಲಿ ಆಯೋಜನೆ ಮಾಡುತ್ತಿರುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಮುಖಂಡರೊಂದಿಗೆ ಕಾಣಿಸಿಕೊಳ್ಳುತ್ತಿದ್ದು, ಕೋಲಾರದ ಕೋರಗೊಂಡಹಳ್ಳಿ ನಿವಾಸಿಯಾಗಿರುವ ದೇವರಾಜ್ ಅವರು ರಾಜಕೀಯ ಪ್ರವೇಶಕ್ಕೆ ಸಿದ್ಧವಾಗುತ್ತಿದ್ದಾರೆ ಎಂದು ಚರ್ಚೆಗಳು ಆರಂಭವಾಗಿದೆ.

Edited By : Manjunath H D
PublicNext

PublicNext

13/04/2026 10:50 pm

Cinque Terre

28.37 K

Cinque Terre

0