ಕೋಲಾರ: ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ದಾನವಹಳ್ಳಿ ಗ್ರಾಮದಲ್ಲಿ ಕೆರೆ ಅಂಗಳದ ಜಾಗ ಒತ್ತುವರಿ ಆರೋಪ ಕೇಳಿಬಂದಿದೆ.
ಸರ್ವೆ ನಂಬರ್ 27 ರಲ್ಲಿ, 9 ಎಕರೆ ಇಪ್ಪತ್ತೆರಡು ಗುಂಟೆ. ಕೆರೆ ಅಂಗಳದ ಜಾಗ ಒತ್ತುವರಿ ಆಗಿದೆಯೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಳೆದ ಏಪ್ರಿಲ್ 2 ರಂದು, ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿ, ಕೆರೆ ಅಂಗಳ ಜಾಗದ ಒತ್ತುವರಿಯನ್ನು ತೆರವುಗೊಳಿಸಿದರು.
ಕೆಲ ಗ್ರಾಮಸ್ಥರು ಮರಳಿ, ಕೆರೆ ಅಂಗಳದಲ್ಲಿ ಅನುಮತಿ ಇಲ್ಲದೆ ಒತ್ತುವರಿ ಮಾಡಿಕೊಂಡು ಖಾಸಗಿ ಚಟುವಟಿಕೆಗೆ ಬಳಸುತ್ತಿದ್ದ ಆರೋಪ ಜನ ಮಾಡಿದ್ದಾರೆ. ಕೆರೆಯ ಒತ್ತುವರಿಯನ್ನು ಶಾಶ್ವತವಾಗಿ ಬಿಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
PublicNext
13/04/2026 10:57 pm
LOADING...