ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಸಿಡಿಲು ಬಡಿದು 200 ಕಿಂಟಲ್ ಗೋವಿನ ಜೋಳ ಸುಟ್ಟು ಭಸ್ಮ - ಸ್ಥಳಕ್ಕೆ ತಹಸೀಲ್ದಾರ್ ಭೇಟಿ

ಕಲಘಟಗಿ : ಕಲಘಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ ನಿನ್ನೆ ಸಂಜೆ ಸಿಡಿಲು ಬಡಿದು ಸೋಲಾರ್ ಪ್ಯಾನಲ್ ಸುಟ್ಟು ಸುಮಾರು 200 ಕ್ವಿಂಟಲ್ ಗೋವಿನ ಜೋಳ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.

ನಿನ್ನೆ ಸಂಜೆ ಗ್ರಾಮದಲ್ಲಿ ಭಾರಿ ಸಿಡಿಲು ಮಳೆ ಆಗಮಿಸಿದ್ದು ರುದ್ರಯ್ಯ ಗೊಡಿಮನಿ ಎಂಬ ರೈತನ ಹೊಲದಲ್ಲಿ ಸೋಲಾರ್ ಪ್ಯಾನಲ್‌ಗೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡಿದೆ.

ನಂತರ ಅದೇ ಬೆಂಕಿಯು ಹತ್ತಿರದ ಗೋವಿನ ಜೋಳದ ರಾಶಿಗೆ ಹತ್ತಿಕೊಂಡಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ರೈತನು ಕೂಡಲೇ ಸಂತೋಷ ಲಾಡ್ ಅವರ ಆಪ್ತ ಸಹಾಯಕರಿಗೆ ವಿಷಯ ತಿಳಿಸಿದ್ದಾನೆ.

ಕೂಡಲೇ ಸ್ಪಂದಿಸಿದ ಸಂತೋಷ ಲಾಡ್ ಆಪ್ತ ಸಹಾಯಕರಾದ ಸೋಮಶೇಖರ ಬೆನ್ನೂರು ಘಟನಾ ಸ್ಥಳಕ್ಕೆ ಅಗ್ನಿಶಾಮಕ ವಾಹನವನ್ನು ಕಳುಹಿಸಿ ಕೊಟ್ಟಿದ್ದಾರೆ. ನಂತರ ಗ್ರಾಮಸ್ಥರು ಕೂಡ ಆಗಮಿಸಿ ಬೆಂಕಿ ಆರಿಸುವಲ್ಲಿ ಸಹಾಯ ಮಾಡಿದ್ದಾರೆ.

ಸುಮಾರು 200 ಕ್ವಿಂಟಲ್ ಗೋವಿನ ಜೋಳ ಸಂಪೂರ್ಣ ಸುಟ್ಟು ಹೋಗಿದ್ದು ಐದರಿಂದ ಆರು ಲಕ್ಷದ ವರೆಗೂ ರೈತನಿಗೆ ನಷ್ಟವಾಗಿದೆ. ಇಂದು ಮುಂಜಾನೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಬಸವರಾಜ್ ಹೊಂಕಣ್ಣವರ ಹಾಗೂ ಸಂತೋಷ್ ಲಾಡ್ ಆಪ್ತ ಸಹಾಯಕರಾದ ಸೋಮಶೇಖರ ಬೆನ್ನೂರು ಪರಿಶೀಲನೆ ನಡೆಸಿದರು.

ರೈತನಿಗೆ ಆದಂತಹ ನಷ್ಟವನ್ನು ಸರ್ಕಾರದಿಂದ ಕೊಡಿಸುವುದಾಗಿ ತಹಸೀಲ್ದಾರ್ ಅವರು ತಿಳಿಸಿದರು. ಅಷ್ಟೇ ಅಲ್ಲದೆ ಸಂತೋಷ್ ಲಾಡ್ ಅವರಿಂದ ವೈಕ್ತಿಕವಾಗಿ ರೈತನಿಗೆ ಪರಿಹಾರ ಕೊಡಿಸುವುದಾಗಿ ಆಪ್ತ ಸಹಾಯಕರಾದ ಸೋಮಶೇಖರ ಬೆನ್ನೂರು ರೈತನಿಗೆ ತಿಳಿಸಿದರು.

ವರದಿ : ಉದಯ ಗೌಡರ ಪಬ್ಲಿಕ್ ನೆಕ್ಸ್ಟ್ ಕಲಘಟಗಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/04/2026 03:17 pm

Cinque Terre

72.96 K

Cinque Terre

1

ಸಂಬಂಧಿತ ಸುದ್ದಿ