ಅಳ್ನಾವರ: ಬಿರು ಬಿಸಿಲಿಗೆ ಬೇಸತ್ತಿದ್ದ ಜನತೆಗೆ ಕಳೆದ ಎರಡು ದಿನ ಸುರಿದ ಭಾರೀ ಮಳೆಗೆ ಭೂಮಿ ತಂಪಾಗಿದೆ. ಆದ್ರೆ ನಿನ್ನೆ ಸುರಿದ ಆಲಿಕಲ್ಲು ಮಳೆಗೆ ಮಾವಿನ ಕಾಯಿಗೆ ಹೊಡೆತ ಬಿದ್ದಿದೆ.
ಅಳ್ನಾವರ ತಾಲೂಕಿನಲ್ಲಿ ಮಾವು ಕೇವಲ ಮಿಶ್ರ ಬೆಳೆಯಾಗದೇ ರೈತರ ಅವಿಭಾಜ್ಯ ಅಂಗವಾಗಿದೆ. ಬಹುಪಾಲು ರೈತರು ಮಾವಿನ ಬೆಳೆಯನ್ನೇ ನಂಬಿದ್ದಾರೆ. ಹೂವು ಬಿಡುವಾಗಿನಿಂದ ಹಿಡಿದು ಇಲ್ಲಿಯವರೆಗೆ ಔಷಧಿ ಸಿಂಪಡನೆಗೆಂದು ಸಾಕಷ್ಟು ಹಣವನ್ನ ಖರ್ಚು ಮಾಡಿದ್ದಾರೆ. ಆದ್ರೆ ಆಲಿಕಲ್ಲು ಮಳೆಗೆ ಮಾವಿನಕಾಯಿ ನೆಲಕಚ್ಚಿದೆ. ಇದರಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಅಳ್ನಾವರ ತಾಲೂಕಿನಾದ್ಯಂತ ಮಾವು ಕೇವಲ ಬೆಳೆಯಾಗಿರದೆ, ರೈತರ ಆರ್ಥಿಕ ಪರಿಸ್ಥಿತಿಯನ್ನ ನಿರ್ಧರಿಸುವ ಅಂಶವಾಗಿದೆ. ವರ್ಷವಿಡೀ ಮಾವಿನ ಗಿಡಗಳಿಗಾಗಿ ರೈತ ಪಡುವ ಕಷ್ಟ ಅಷ್ಟಿಷ್ಟಲ್ಲ. ಫಸಲು ಬರುವ ಹೊತ್ತಲ್ಲಿ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿ ರೈತ ಮತ್ತೆ ಸಾಲದ ಸುಳಿಗೆ ತುತ್ತಾಗುವ ಮುನ್ಸೂಚನೆ ಇದೆ. ಸರ್ಕಾರ ಇದನ್ನ ಗಮನಿಸಿ ಆದಷ್ಟು ಬೇಗ ಪರಿಹಾರ ನೀಡಿದ್ದಲ್ಲಿ ಬದುಕಿಗೆ ಅನುಕೂಲವಾಗುತ್ತದೆ ಎಂಬುದು ತಾಲೂಕಿನ ರೈತರ ಒತ್ತಾಸೆಯಾಗಿದೆ.
ಮಹಾಂತೇಶ ಪಠಾಣಿ, ಪಬ್ಲಿಕ್ ನೆಕ್ಸ್ಟ್, ಅಳ್ನಾವರ
Kshetra Samachara
25/04/2026 01:11 pm
LOADING...