ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ನೂರಾರು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಲೂಕಿನ ಆಲ್ದೂರು ಸೇರಿದಂತೆ ವಸ್ತಾರೆ ಹೋಬಳಿಯ ಆಮೆಕಟ್ಟೆ, ಮಂಗಳವಾರಪೇಟೆ, ಕಟ್ಟೆಗೆದ್ದೆ, ದಿಣ್ಣೇಕೆರೆ ಕೂದುವಳ್ಳಿ, ಪುರ, ತೋರಣಮಾವು, ಕೋಡುವಳ್ಳಿ, ಕೋಟೆವೂರು, ಮಾವಿನಗುಣಿ, ಗುಣಿಗದ್ದೆ, ಮಿಂಚೇರಿ, ಕಲ್ಲುಗುಡ್ಡೆ ಸೇರಿದಂತೆ 25ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಪೂರ್ಣ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಈ ಪ್ರಕೃತಿ ವಿಕೋಪದಿಂದಾಗಿ ಮೆಸ್ಕಾಂ ಇಲಾಖೆಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ಕಡಿತಗೊಂಡಿರುವ ವಿದ್ಯುತ್ ಸಂಪರ್ಕವನ್ನು ಪುನರ್ ಸ್ಥಾಪಿಸಲು ಮೆಸ್ಕಾಂ ಸಿಬ್ಬಂದಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಭಾರಿ ಮಳೆಯ ನಡುವೆಯೂ ಕಂಬಗಳನ್ನು ಸರಿಪಡಿಸಲು ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದಾರೆ.
Kshetra Samachara
24/04/2026 09:33 pm
LOADING...