ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಶುಕ್ರವಾರ ಸುರಿದ ಧಾರಾಕಾರ ಮಳೆ ಅವಾಂತರಗಳನ್ನು ಸೃಷ್ಟಿಸಿದೆ ಆಲ್ದೂರು ಗ್ರಾಮದ ಬಳಿ ಸುರಿದ ಭಾರೀ ಮಳೆಯ ವೇಳೆ ಮರವೊಂದು ಚಲಿಸುತ್ತಿದ್ದ ಕಾರಿನ ಮೇಲೆ ಬೀಳಬೇಕಿದ್ದ ಘಟನೆ ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾಸನ ಮೂಲದ ಪ್ರಯಾಣಿಕರು ಮಲೆನಾಡಿನ ಬಿರುಗಾಳಿ ಸಹಿತ ಮಳೆಯ ವಿಡಿಯೋ ಚಿತ್ರೀಕರಿಸುತ್ತಾ ಸಾಗುತ್ತಿದ್ದ ಸಂದರ್ಭದಲ್ಲಿ ಈ ಆಕಸ್ಮಿಕ ಘಟನೆ ಸಂಭವಿಸಿದೆ.
ರಸ್ತೆಯ ಬದಿಯಲ್ಲಿದ್ದ ಬೃಹತ್ ಮರವೊಂದು ಏಕಾಏಕಿ ಕಾರಿನ ಮುಂದೆಯೇ ಕುಸಿದು ಬೀಳುವುದನ್ನು ಗಮನಿಸಿದ ಚಾಲಕ, ಸಮಯಪ್ರಜ್ಞೆ ಮೆರೆದು ತಕ್ಷಣವೇ ಬ್ರೇಕ್ ಹಾಕಿದ ಪರಿಣಾಮ ಮರವು ಕಾರಿನ ಮೇಲೆ ಬೀಳುವ ಬದಲು ಮುಂಭಾಗಕ್ಕೆ ಬಿದ್ದಿದೆ. ಈ ಕ್ಷಣಾರ್ಧದ ನಿರ್ಧಾರದಿಂದಾಗಿ ಕಾರಿನಲ್ಲಿದ್ದವರು ಹಾಗೂ ವಾಹನ ಎರಡೂ ಯಾವುದೇ ಹಾನಿಯಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದು, ಸದ್ಯ ಈ ರೋಮಾಂಚನಕಾರಿ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
PublicNext
25/04/2026 11:03 pm
LOADING...