ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಭಾರೀ ಮಳೆಗೆ ನದಿಯಂತಾದ ರಸ್ತೆ

ಚಿಕ್ಕಮಗಳೂರು: ಭಾರೀ ಮಳೆಗೆ ನದಿಯಂತಾದ ರಸ್ತೆ ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಸೇರಿದಂತೆ ಚಿಕ್ಕಮಗಳೂರು ನಗರದಲ್ಲಿ ಗುಡುಗು ಸಿಡಿಲಿನೊಂದಿಗೆ ಆಲಿಕಲ್ಲು ಮಳೆ ಸುರಿದಿದೆ ಮಳೆಯ ಸಿಂಚನದಿಂದ ವಾತಾವರಣ ತಂಪಾಗಿರುವುದು ಜನರಲ್ಲಿ ಹರ್ಷ ತಂದಿದೆ.

ಮಳೆಯ ಆರ್ಭಟದಿಂದ ನಗರದ ಹಲವೆಡೆ ಚರಂಡಿಗಳು ಬ್ಲಾಕ್ ಆಗಿದ್ದು, ಮಳೆನೀರು ರಸ್ತೆಯ ಮೇಲೆ ಹೊಳೆ ಹರಿದಂತೆ ಹರಿಯಿತು ಇದರಿಂದಾಗಿ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುವಂತಾಯಿತು ನಗರದ ಮಲ್ಲಂದೂರು ರಸ್ತೆಯಲ್ಲಿ ಮಳೆಯ ನೀರು ನದಿಯಂತೆ ಹರಿದಿದ್ದು ವಾಹನ ಸವಾರರು ಪಾದಚಾರಿಗಳು ಸಂಕಷ್ಟ ಅನುಭವಿಸಿದರು.

Edited By :
PublicNext

PublicNext

27/04/2026 05:36 pm

Cinque Terre

15.7 K

Cinque Terre

0

ಸಂಬಂಧಿತ ಸುದ್ದಿ