ನವಲಗುಂದ: ರಕ್ತದಾನ, ಮಹಾದಾನ. ರಕ್ತದಾನದಿಂದ ಆರೋಗ್ಯ ವೃದ್ಧಿಯಾಗುತ್ತದೆ. ಆರೋಗ್ಯವಂತರು ರಕ್ತದಾನ ಮಾಡಬೇಕು ಎಂದು ಹುಬ್ಬಳ್ಳಿಯ ರೋಟರಿ ಬ್ಲಡ್ ಬ್ಯಾಂಕ್‌ನ ತಾಂತ್ರಿಕ ನಿರ್ದೇಶಕರಾದ ರಾಧಿಕಾ ಆಷ್ಟೆ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಭಾರತೀಯ ರೆಡ್‌ಕ್ರಾಸ್, ಭಾರತ್ ಸೈಟ್ಸ್ ಮತ್ತು ಗೈಡ್ಸ್, ಎನ್‌ಎಸ್‌ಎಸ್ ಹಾಗೂ ಧಾರವಾಡದ ರೋಟರಿ ಬ್ಲಡ್ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಪ್ರಾಂಶುಪಾಲ ಎಂ.ಬಿ.ಬಾಗಡಿ ಮಾತನಾಡಿ, ಅರ್ಹತೆ ಇರುವ ಎಲ್ಲ ವಿದ್ಯಾರ್ಥಿಗಳು ರಕ್ತದಾನ ಮಾಡುವ ಮುಖಾಂತರ ರೋಗಿಗಳಿಗೆ ನೆರವಾಗಬೇಕು ಎಂದರು.
ಸಿಪಿಐ ರವಿಕುಮಾರ ಕಪ್ಪತ್ತಣ್ಣವರ, ಪಿಎಸ್‌ಐ ಜನಾರ್ದನ್ ಭಟ್ರಳ್ಳಿ ಹಾಗೂ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿ 40 ಯೂನಿಟ್ ರಕ್ತದಾನ ಮಾಡಿದರು.
ಈ ವೇಳೆ ಗಣೇಶ್ ಧೋಂಗಡಿ, ಗಂಗಾಧರ ಗೌಡರ, ಪ್ರಸನ್ನ ಪಂಢರಿ, ಶ್ರೀಧರ ಲೋನಕರ್, ರವಿ ಬ್ಯಾಹಟ್ಟಿ, ಮಧು ಹುಣಸಗಿ, ಸುಜಾತಾ ಬರದೂರ, ಪ್ರಹತ್ ತಂದೂರ, ಸವಿತಾ ಚಿಕ್ಕಣ್ಣವರ, ಸಂತೋಷ ಹುಬ್ಬಳ್ಳಿ ಇದ್ದರು.
Kshetra Samachara
27/04/2026 09:16 am
LOADING...