ಹುಬ್ಬಳ್ಳಿ: ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಎಲ್ಲರೂ ಆದಷ್ಟು ನೆರಳಲ್ಲಿ ಇರಬೇಕು, ನೀರು ಹೆಚ್ಚಾಗಿ ಕುಡಿಯಬೇಕೆಂದು ಕಿಮ್ಸ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಈಶ್ವರ ಹಸಬಿ ಅವರು ಹೇಳಿದರು.
ಮಾಧ್ಯಮದ ಜೊತೆ ಮಾತಾನಾಡಿದ ಅವರು, ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೆಎಂಸಿ ಆರ್‌ಐ ಆಸ್ಪತ್ರೆಯಲ್ಲಿ 14 ಬೆಡ್‌ಗಳ ಹವಾನಿಯಂತ್ರಿತ 'ಹೀಟ್ ಸ್ಟೋಕ್' ವಾರ್ಡ್ ತೆರೆಯಲಾಗಿದೆ. ಇದರಲ್ಲಿ ವೆಂಟಿಲೇಟರ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಈವರೆಗೂ ಗಂಭೀರ ಪ್ರಕರಣಗಳು ದಾಖಲಾಗಿಲ್ಲ. ಆದರೂ ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರು ವಿಶೇಷ ಕಾಳಜಿ ವಹಿಸಬೇಕು ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/04/2026 07:35 pm
LOADING...