ಹುಬ್ಬಳ್ಳಿ: ದಿನೇ ದಿನೇ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದ ಜನರು ಹೈರಾಣಾಗಿದ್ದಾರೆ. ನೆತ್ತಿ ಸುಡುವ ಬಿಸಿಲಿಗೆ ರಕ್ತದ ಕೊರತೆ ಎದುರಾಗಿದ್ದು, ರಕ್ತದಾನ ಮಾಡಲು ರಕ್ತದಾನಿಗಳು ಹಿಂದೇಟು ಹಾಕುತ್ತಿದ್ದು, ಹೀಗಾಗಿ ಹುಬ್ಬಳ್ಳಿಯ ರಕ್ತದ ಅಭಾವ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲು ಕೂಡ ರಕ್ತವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ರಕ್ತ ಇಲ್ಲದೇ ಪರದಾಡುತ್ತಿರುವ ರೋಗಿಗಳು. ರಕ್ತದಾನಿಗಳಿಲ್ಲದೇ ಬ್ಲಡ್ ಬ್ಯಾಂಕ್‌ಗಳು ಖಾಲಿ ಖಾಲಿ. ಹೌದು..ಹುಬ್ಬಳ್ಳಿ-ಧಾರವಾಡದಲ್ಲಿ ಒಂದು ಬ್ಲಡ್ ಬ್ಯಾಂಕಿನಲ್ಲಿ ಪ್ರತಿನಿತ್ಯ 80-100 ಜನ ರಕ್ತದಾನ ಮಾಡ್ತಾ ಇದ್ದರು. ಆದರೆ ಬಿಸಿಲಿಗೆ ಭಯಗೊಂಡು 7-8 ರಿಂದ ಜನರು ಮಾತ್ರ ರಕ್ತದಾನ ಮಾಡುತ್ತಿದ್ದಾರೆ. ರಕ್ತದಾನ ಮಾಡಿದ ಮೇಲೆ ದಾನಿಗಳಿಗೆ ಆಗುತ್ತಿದೆ ಬಿಸಿಲಿಗೆ ಸುಸ್ತು ಮತ್ತು ಆಯಾಸ ಈ ನಿಟ್ಟಿನಲ್ಲಿ ರಕ್ತದಾನಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಇನ್ನೂ ಕೆಲವು ದಾನಿಗಳು ಮೂರ್ಚೆ ಸಹ ಹೋಗುತ್ತಿದ್ದಾರೆ. ಇದರಿಂದ ರಕ್ತದಾನಿಗಳು ಬ್ಲಡ್ ಬ್ಯಾಂಕ್ ಬಳಿಯೇ ಸುಳಿಯುತ್ತಿಲ್ಲ. ಈ ರೀತಿ ಹಲವು ಕಾರಣಗಳಿಂದ ರಕ್ತದ ಯೂನಿಟ್‌ಗಳನ್ನ ಸಂಗ್ರಹಿಸಲು ಪರದಾಟ ನಡೆಸುತ್ತಿದ್ದಾರೆ. ಬೇಸಿಗೆ ಕಾಲ ಮುಗಿಯುವವರೆಗೂ ರಕ್ತದ ಯೂನಿಟ್‌ಗಳನ್ನ ಹೊಂದಿಸಲು ಬ್ಲಡ್ ಬ್ಯಾಂಕ್‌ಗಳು ಹೈರಾಣಾಗಿದ್ದು, ರಕ್ತದಾನ ಮಹಾದಾನ, ರಕ್ತ ಕೊಟ್ಟು ಜೀವ ಉಳಿಸಿ ಎನ್ನುತ್ತಿವೆ ಬ್ಲಡ್ ಬ್ಯಾಂಕ್‌ಗಳು.
ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/04/2026 04:37 pm
LOADING...