ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬಿಸಿಲಿಗೆ ಕಂಗೆಟ್ಟ ಜನತೆ: ಜಿಲ್ಲಾಸ್ಪತ್ರೆಯಲ್ಲಿ ಆರಂಭವಾಯ್ತು ತಾಪಾಘಾತ ಕೊಠಡಿ

ಧಾರವಾಡ: ಸದ್ಯ ದಿನದಿಂದ ದಿನಕ್ಕೆ ಬಿಸಿಲಿನ ತಾಪಾಮಾನ ಹೆಚ್ಚಾಗುತ್ತಿದೆ. ಪ್ರತಿದಿನ ಧಾರವಾಡದಲ್ಲಿ 36-40 ಡಿಗ್ರಿ ಸೆಲ್ಸಿಯಸ್‌ವರೆಗೆ ಬಿಸಿಲಿನ ತಾಪಮಾನ ಏರುತ್ತಿದೆ. ಮಧ್ಯಾಹ್ನದ ಅವಧಿಯಲ್ಲಿ ಚಿಕ್ಕಮಕ್ಕಳು ಹಾಗೂ ವಯೋವೃದ್ಧರು ಹೊರಗಡೆ ಹೋಗದಂತೆಯೂ ಸೂಚನೆ ನೀಡಲಾಗಿದೆ.

ಆದಾಗ್ಯೂ ಬಿಸಿಲಿನ ತಾಪಮಾನದಿಂದ ಯಾರಾದರೂ ತೊಂದರೆಗೀಡಾದರೆ ಅವರ ಆರೈಕೆಗಾಗಿಯೇ ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ವಿಶೇಷ ಕೊಠಡಿಯೊಂದನ್ನು ತೆರೆಯಲಾಗಿದೆ.

ಹೌದು! ಧಾರವಾಡ ಜಿಲ್ಲಾ ಆಸ್ಪತ್ರೆಗೆ ಪಕ್ಕದ ಜಿಲ್ಲೆಗಳಿಂದಲೂ ಜನ ಬರುತ್ತಾರೆ. ಈ ಭಾಗದ ಜನರಿಗೆ ಈ ಜಿಲ್ಲಾ ಆಸ್ಪತ್ರೆ ಸಂಜೀವಿನಿಯೇ ಆಗಿದೆ. ಸದ್ಯ ಬಿಸಿಲಿನ ತಾಪಮಾನದಿಂದ ಅನಾರೋಗ್ಯಕ್ಕೆ ತುತ್ತಾಗುವ ಜನರ ಆರೈಕೆಗೆ ಜಿಲ್ಲಾ ಆಸ್ಪತ್ರೆ ಮುಂದಾಗಿದೆ. ಅಂತಹ ಜನರು ಆಸ್ಪತ್ರೆಗೆ ಬಂದರೆ ಅವರಿಗಾಗಿಯೇ ಆಸ್ಪತ್ರೆಯಲ್ಲಿ ತಾಪಾಘಾತ ಕೊಠಡಿ ಎಂಬ ಕೊಠಡಿಯನ್ನು ತೆರೆಯಲಾಗಿದೆ.

ಈ ಕೊಠಡಿಯಲ್ಲಿ ಎಸಿ, ಫ್ಯಾನ್ ಹಾಗೂ 10 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಇದಕ್ಕೆ ವೈದ್ಯರೊಬ್ಬರನ್ನು ನೇಮಿಸಲಾಗಿದ್ದು, ಬಿಸಿಲಾಘಾತದಿಂದ ಬಂದವರಿಗೆ ಸೂಕ್ತ ಚಿಕಿತ್ಸೆ ನೀಡಲು ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ.

ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಒಂದು ತಾಪಾಘಾತ ಕೊಠಡಿ ತೆಗೆದು ಅಲ್ಲಿ 10 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಈ ರೀತಿಯ ಕೊಠಡಿ ತೆರೆದಿರುವುದರಿಂದ ಬಿಸಿಲಿನ ತಾಪಮಾನದಿಂದ ತೊಂದರೆ ಅನುಭವಿಸುತ್ತಿರುವ ರೋಗಿಗಳಿಗೆ ಒಳ್ಳೆಯದಾಗಿದೆ.

ಬಿಸಿಲಿನ ತಾಪಮಾನ ಇನ್ನೂ ಹೆಚ್ಚಾಗಿದ್ದೇ ಆದಲ್ಲಿ ಹೆಚ್ಚುವರಿ ಬೆಡ್‌ಗಳ ವ್ಯವಸ್ಥೆಯನ್ನೂ ಮಾಡಲಾಗುವ ಭರವಸೆಯನ್ನು ಜಿಲ್ಲಾ ಶಸ್ತ್ರ ಚಿಕಿತ್ಸಕರು ತಿಳಿಸಿದ್ದಾರೆ.

ಒಟ್ಟಾರೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಇದರಿಂದ ತೊಂದರೆಗೀಡಾದವರ ಆರೈಕೆಗಾಗಿ ಜಿಲ್ಲಾ ಆಸ್ಪತ್ರೆಯು ತಾಪಾಘಾತ ಕೊಠಡಿ ಎಂಬ ಕೊಠಡಿ ತೆರೆದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

25/04/2026 08:50 am

Cinque Terre

24.65 K

Cinque Terre

0

ಸಂಬಂಧಿತ ಸುದ್ದಿ