ಚಿಕ್ಕಮಗಳೂರು: ಮೆಸ್ಕಾಂ ಆಲ್ದೂರು ಉಪವಿಭಾಗದ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ವಿವಿಧ ಗ್ರಾಮಗಳಲ್ಲಿ ಮೂರು ದಿನಗಳ ಕಾಲ ವಿದ್ಯುತ್ ವ್ಯತ್ಯಯವಾಗಲಿದೆ.
ಎಸ್‌ಎಂ ಪೇಟೆ ಶಾಖಾ ವ್ಯಾಪ್ತಿಯ ಶಂಕರ್‌ಫಾಲ್ಸ್ ಫೀಡರ್‌ನ ಬಸರವಳ್ಳಿ ಜಿಎಸ್‌ಎಸ್‌ನಿಂದ ಪುರ ಜಿಎಸ್‌ಎಸ್ ಹಾಗೂ ತುಂಬೇಪುರ ಡಿಪಿ ವರೆಗಿನ ತಾಮ್ರದ ವಾಹಕ ಬದಲಾವಣೆ ಮತ್ತು ಎಸಿಎಸ್‌ಆರ್ ವಾಹಕ ಅಳವಡಿಸುವ ಕಾರ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 28, 29 ಮತ್ತು 30ರಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಇದರಿಂದಾಗಿ ಕಣತಿ ಫೀಡರ್ ಮೂಲಕ ವಿದ್ಯುತ್ ಪಡೆಯುವ ಹುಣಸೇಹಳ್ಳಿ, ಜರಿಕುಂಬ್ರಿ, ತುಂಬಳ್ಳಿ ಪುರ, ಬೆಟ್ಟದಮಳಲಿ, ಐದಳ್ಳಿ, ಅರೇನೂರು, ಅನಿಗನಹಳ್ಳಿ, ಗವಿಗದ್ದೆ, ಮಾಗೋಡು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಅಲ್ಲದೆ ಬೈಗೂರು, ಬಸರವಳ್ಳಿ ಮತ್ತು ದೇವದಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಸಾರ್ವಜನಿಕರು ಈ ಕಾರ್ಯಕ್ಕೆ ಸಹಕರಿಸಬೇಕೆಂದು ಮೆಸ್ಕಾಂ ಆಲ್ದೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕರು ಪ್ರಕಟಣೆಯ ಮೂಲಕ ಕೋರಿದ್ದಾರೆ.
PublicNext
28/04/2026 09:04 am
LOADING...