ಹುಬ್ಬಳ್ಳಿ : ತಾಯಿ ಇಲ್ಲದ ದಿವ್ಯಾಂಗ ಹಾಗೂ ವಿಶೇಷ ಚೇತನನ ಬದುಕಿಗೆ ಕೆಜಿಪಿ ಫೌಂಡೇಶನ್ ದಾರಿದೀಪ ಆಗಿದೆ. ಸುಮಾರು ವರ್ಷಗಳಿಂದ ಮನೆ ಇಲ್ಲದೆ ಗೋಳಾಡುತ್ತಿದ್ದ ಕಡುಬಡ ಕುಟುಂಬಕ್ಕೆ KGP ಫೌಂಡೇಶನ್ ಸಂಸ್ಥಾಪಕ ಶ್ರೀಗಂಧ ಶೇಟ್ ಅವರು ಸೂರು ಕಲ್ಪಿಸಿಕೊಡುವ ಭರವಸೆ ನೀಡಿದ್ದಾರೆ.
ಹೌದು.. ಹುಬ್ಬಳ್ಳಿಯ ಆನಂದ್ ನಗರದ ನಿವಾಸಿ ಜೀವನ ಗಣೇಶ ವಾಲಿಕಾರ ದಿವ್ಯಾಂಗ ಹಾಗೂ ವಿಶೇಷಚೇತನ ಬಾಲಕನಾಗಿದ್ದು, ಈ ಬಾಲಕನ ತಂದೆ ಆಟೋ ಚಾಲನೆ ಮಾಡಿಕೊಂಡು ತಮ್ಮ ಬದುಕಿನ ಜಟಕಾಬಂಡಿ ಸಾಗಿಸುತ್ತಿದ್ದರು.
ಇವರಿಗೆ ವಾಸಿಸಲು ಸುಸಜ್ಜಿತವಾದ ಮನೆಯೂ ಇಲ್ಲದೆ ಜೀವನ ನಡೆಸುತ್ತಿದ್ದರು. ಶ್ರೀಗಂಧ ಶೇಟ್ ಅವರಿಗೆ ಇದು ಗಮನಕ್ಕೆ ಬರುತ್ತಿದ್ದಂತೆ, ಅದೇ ಮನೆಗೆ ಹೋಗಿ ಆ ಮಗುವಿನ ಸ್ಥಿತಿ ನೋಡಿ ಕರಳು ಹಿಂಡಿದಂತಾಗಿ, ಕೂಡಲೇ ಆ ಕೆಜಿಪಿ ಫೌಂಡೇಶನ್ ವತಿಯಿಂದ ಆರ್ಥಿಕ ನೆರವು ನೀಡಿ ಮನೆ ಕಟ್ಟಿಸಿ ಕೊಡುವ ಭರವಸೆ ನೀಡಿ ಆ ಬಡ ಕುಟುಂಬಕ್ಕೆ ಆಸರೆಯಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/04/2026 07:26 am
LOADING...