ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುಟ್ಟ ಮಗುವಿನಿಂದ ಎರಡು ಕುಟುಂಬ ಒಂದು ಮಾಡಿದ ಇನ್ಸ್‌ಪೆಕ್ಟರ್ ಎಸ್.ಆರ್ ನಾಯಕ

ಹುಬ್ಬಳ್ಳಿ: ಪ್ರೀತಿ ಮಾಡಿ ಹುಡುಗ ಹುಡುಗಿ ಓಡಿ ಹೋಗಿರುತ್ತಾರೆ. ಹುಡುಗಿ ತಂದೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಕಂಪ್ಲೆಂಟ್ ಕೊಟ್ಟಿರುತ್ತಾರೆ. ಇನ್ಸ್ಪೆಕ್ಟರ್ ಎಸ್ ಆರ್ ನಾಯಕ ಅವರು ಹುಡುಗ ಹುಡುಗಿಯನ್ನು ಕರೆಯಿಸಿರುತ್ತಾರೆ. ಈ ಎರಡು ಕುಟುಂಬಗಳನ್ನು ಒಂದು ಪುಟ್ಟ ಮಗುವಿನಿಂದ ಇನ್ಸ್‌ಪೆಕ್ಟರ್ ಒಂದು ಮಾಡುತ್ತಾರೆ.

ಹೌದು,,, ಪ್ರೀತಿ ಮಾಡಿ ಓಡಿ ಹೋದ ಹುಡುಗಿ ತನ್ನ ಅಕ್ಕನ ಮಗಳನ್ನು ತುಂಬ ಹಚ್ಚಿಕೊಂಡಿರುತ್ತಾಳೆ. ಆ ಮಗು ಕೂಡ ಅವಳನ್ನು ಹಚ್ಚಿಕೊಂಡಿರುತ್ತೆ, ಹುಡುಗ ಹುಡುಗಿಯನ್ನು ಪೊಲೀಸರು ಕರೆಯಿಸಿದ ನಂತರ ಮಗು ಅವಳನ್ನು ನೋಡಿ ತುಂಬಾ ಅಳುತ್ತದೆ. ಆಗ ಇನ್ಸ್‌ಪೆಕ್ಟರ್ ಎಸ್ ಆರ್ ನಾಯಕ ಅವರು ಬಿನ್ ಡ್ರೆಸ್‌ದಲ್ಲಿದ್ರೂ ಕೂಡ ಠಾಣೆಗೆ ಬಂದು ಮಗುವನ್ನು ಎತ್ತುಕೊಂಡು ರಂಬಿಸುತ್ತಾರೆ. ಅಷ್ಟೇ ಅಲ್ಲದೆ ಎರಡು ಕುಟುಂಬಕ್ಕೂ ತಿಳಿ ಕಳಿಸುತ್ತಾರೆ. ಇನ್ಸ್‌ಪೆಕ್ಟರ್ ನಾಯಕ ಅವರು ಮಗುವಲ್ಲಿ ಮಗುವಾದರು. ತಮ್ಮ ಕರ್ತವ್ಯದ ಜೊತೆಗೆ ಮನುಷ್ಯತ್ವ ತೋರಿದರು.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/04/2026 02:42 pm

Cinque Terre

33.86 K

Cinque Terre

2

ಸಂಬಂಧಿತ ಸುದ್ದಿ