ವಿಶೇಷ ವರದಿ :
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಗಾಳಿ ಮಳೆ ರೈತರ ಬದುಕನ್ನು ನುಂಗಿ ಹಾಕಿದೆ. ಕಂಡು ಕೇಳರಿಯದ ಗಾಳಿ ಮಳೆ ಭದ್ರಾವತಿ ತಾಲೂಕಿನ ಹತ್ತಾರು ಹಳ್ಳಿಯ ರೈತರ ಬದುಕನ್ನು ನೀರಿನಲ್ಲಿ ಕೊಚ್ಚಿ ಹಾಕಿದೆ.
ಹೌದು, ಮೊನ್ನೆ ಸುರಿದ ಗಾಳಿ ಮಳೆ ನೂರಾರು ರೈತರ ಬದುಕನ್ನು ಬೀದಿಪಾಲು ಮಾಡಿದೆ. ಭದ್ರಾವತಿ ತಾಲೂಕಿನ ಅರಹತೊಳಲು, ಅರಹತೊಳಲು ವಡ್ಡರಹಟ್ಟಿ, ಕೈಮರ, ಮಲ್ಲಿಗೆನಹಳ್ಳಿ, ಹನುಮಂತಪುರ, ಮಂಗೋಟೆ, ಸನ್ಯಾಸಿ ಕೋಡಮಗಿ ಸೇರಿದಂತೆ ಹತ್ತಾರು ಹಳ್ಳಿಯಲ್ಲಿ ಮೊನ್ನೆ ಸುರಿದ ಗಾಳಿ ಮಳೆ ರೈತರ ಬದುಕಿಗೆ ಕೊಳ್ಳಿ ಇಟ್ಟಿದೆ. ಹತ್ತಾರು ವರ್ಷ ಸಾಕಿ ಬೆಳೆಸಿದ್ದ ಅಡಿಕೆ, ತೆಂಗಿನ ಮರಗಳು ಗಾಳಿ ಮಳೆಗೆ ನೆಲಕಚ್ಚಿದೆ. ಒಂದೊಂದು ಎಕರೆಯಲ್ಲೂ ಅರ್ಧಗರ್ಧ ತೋಟ ನೆಲಕಚ್ಚಿದೆ.
ಅಡಿಕೆ ತೋಟವನ್ನೇ ನಂಬಿ ಬದುಕುತ್ತಿದ್ದ ರೈತನ ಬಾಳಿನಲ್ಲಿ ಬಿರುಗಾಳಿ ಬೀಸಿ ದಿಕ್ಕೇ ತೋಚದಂತಹ ಪರಿಸ್ಥಿತಿ ರೈತನಿಗೆ ಮೂಡಿದೆ. ಇನ್ನು ಬೆಳೆ ಕಳೆದುಕೊಂಡು ರೈತರು ಕಣ್ಣೀರಿಡುತ್ತಿದ್ದಾರೆ.
ಇನ್ನು ಅಡಿಕೆ ತೋಟ ಕಳೆದುಕೊಂಡ ರೈತರು ಸೂಕ್ತ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಹತ್ತಾರು ವರ್ಷ ಸಾಕಿ ಬೆಳೆಸಿದ್ದ ತೋಟ ನೆಲಸಮವಾಗಿರುವುದು ಕಂಡು ರೈತರು ನೊಂದು ಹೋಗಿದ್ದಾರೆ..
ಒಟ್ಟಾರೆ, ಕಣ್ಣೇದುರೇ ಲಕ್ಷಾಂತರ ರೂಪಾಯಿ ಫಸಲು ನೀಡಿದ್ದ ಅಡಿಕೆ ಮರಗಳು ಗಾಳಿ ಮಳೆಗೆ ನೆಲಕಚ್ಚಿವೆ. ಇತ್ತ ರೈತರು ಬೀದಿಗೆ ಬಿದ್ದಿದ್ದು ಸರ್ಕಾರ ಸೂಕ್ತ ಪರಿಹಾರ ನೀಡಿ ರೈತರಿಗೆ ಬದುಕಿಗೆ ಬೆಳಕು ನೀಡಬೇಕಿದೆ.
ವೀರೇಶ್ ಜಿ ಹೊಸೂರು, ಪಬ್ಲಿಕ್ ನೆಕ್ಸ್ಟ್. ಶಿವಮೊಗ್ಗ...
PublicNext
29/04/2026 01:44 pm
LOADING...