ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ : ನಿವೃತ್ತ ನಿರ್ದೇಶಕರಿಂದ ದೇಹದಾನದ ಆದರ್ಶ - ಸಮಾಜಕ್ಕೆ ಪ್ರೇರಣೆ ಎಂದ ಸಚಿವ ಎಂ.ಬಿ. ಪಾಟೀಲ

ವಿಜಯಪುರ : BLDE ಸಂಸ್ಥೆ ದೇಹದಾನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಅಭಿಯಾನ ಯಶಸ್ವಿಯಾಗಿ ಮುಂದುವರಿದಿದೆ. ಈ ಕಾರ್ಯಕ್ರಮವು ಸಮಾಜದಲ್ಲಿ ದೇಹದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಪರಿಣಾಮಕಾರಿ ಹೆಜ್ಜೆಯಾಗಿದೆ.

BLDE ಸಂಸ್ಥೆಯ ಈ ಅಭಿಯಾನದಿಂದ ಪ್ರೇರಿತರಾಗಿ, ವಿಜಯಪುರ ನಗರದ ನಿವಾಸಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ನಿರ್ದೇಶಕ ಮಲ್ಲಿಕಾರ್ಜುನ ಗುರುಮೂರ್ತಿ ತಮ್ಮ ದೇಹದಾನ ಮಾಡಲು ನಿರ್ಧರಿಸಿದ್ದಾರೆ. ಅವರ ಈ ನಿರ್ಧಾರ ಸ್ವಾಗತಾರ್ಹ.

ವೈದ್ಯಕೀಯ ಸಂಶೋಧನೆ ಮತ್ತು ಸಮಾಜದ ಹಿತದೃಷ್ಟಿಯಿಂದ ಇಂತಹ ಉದಾತ್ತ ನಿರ್ಧಾರ ಕೈಗೊಂಡ ಮಲ್ಲಿಕಾರ್ಜುನ ಗುರುಮೂರ್ತಿ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು ಎಂದಿದ್ದಾರೆ. ಗುರುಮೂರ್ತಿಯವರ ಆದರ್ಶ ಸಮಾಜಕ್ಕೆ ಸ್ಫೂರ್ತಿಯಾಗಲಿದೆ ಎಂದು ಸಚಿವ ಎಂ.ಬಿ. ಪಾಟೀಲ ಪ್ರಶಂಸಿಸಿದ್ದಾರೆ.

Edited By : Abhishek Kamoji
PublicNext

PublicNext

29/04/2026 06:32 pm

Cinque Terre

24.05 K

Cinque Terre

0

ಸಂಬಂಧಿತ ಸುದ್ದಿ