ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗನನ್ನು ಉಳಿಸಲು ಚಲಿಸುವ ರೈಲಿನಿಂದಲೇ ಜಿಗಿದ ಅಪ್ಪ : ಮಗನಿಗೆ ಮರುಜನ್ಮ ನೀಡಿದ ತಂದೆ

ಢಾಕಾ: ಅಪ್ಪ ಅಂದ್ರೆ ಕೇವಲ ಒಂದು ಪದ ಅಲ್ಲ, ಅದು ಒಂದು ಭದ್ರತೆ, ಒಂದು ಶಕ್ತಿ, ಒಂದು ಜೀವದ ಆಧಾರ. ತಂದೆಯ ಪ್ರೀತಿಗಿಂತ ದೊಡ್ಡ ಶಕ್ತಿ ಯಾವುದೂ ಇಲ್ಲ" ಎಂಬ ಮಾತನ್ನು ಬಾಂಗ್ಲಾದೇಶದಲ್ಲಿ ನಡೆದ ಹೃದಯ ಕಲಕುವ ಘಟನೆಯೊಂದು ಮತ್ತೊಮ್ಮೆ ಸಾಬೀತುಪಡಿಸಿದೆ.

ರೈಲಿನಿಂದ ಆಯತಪ್ಪಿ ಬೀಳುತ್ತಿದ್ದ ತನ್ನ ಪುಟ್ಟ ಮಗನನ್ನು ಉಳಿಸಲು, ತನ್ನ ಪ್ರಾಣದ ಹಂಗು ತೊರೆದು ವೇಗವಾಗಿ ಚಲಿಸುತ್ತಿದ್ದ ರೈಲಿನಿಂದಲೇ ತಂದೆಯೊಬ್ಬರು ಜಿಗಿದು ಮಗನನ್ನು ಮೃತ್ಯುಂಜಯಿಯಾಗಿ ರಕ್ಷಿಸಿದ್ದಾರೆ.

ಹೌದು ತಂದೆ ಮತ್ತು ಮಗ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಬಾಗಿಲ ಬಳಿಯಿದ್ದ ಮಗು ಆಕಸ್ಮಿಕವಾಗಿ ಆಯತಪ್ಪಿ ಕೆಳಕ್ಕೆ ಬಿದ್ದಿದೆ. ಮಗನನ್ನು ಅಪಾಯದಲ್ಲಿ ಕಂಡ ತಕ್ಷಣ, ತಂದೆ ಕಿಂಚಿತ್ತು ಯೋಚಿಸದೆ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಹಾರಿದ್ದಾರೆ. ವೇಗವಾಗಿ ಸಾಗುತ್ತಿದ್ದ ರೈಲಿನಿಂದ ಜಿಗಿಯುವುದು ಅತ್ಯಂತ ಅಪಾಯಕಾರಿ ಎಂದು ತಿಳಿದಿದ್ದರೂ ಅಪ್ಪನ ತಲೆಯಲ್ಲಿ ಓಡಿದ್ದು ಕಂದನನ್ನು ಕಾಪಾಡಬೇಕು ಎನ್ನುವುದು ಅಷ್ಟೇ. ಇನ್ನು ಹಳಿಗಳ ಪಕ್ಕದಲ್ಲಿ ಬಿದ್ದ ತಂದೆ, ತೀವ್ರವಾಗಿ ಗಾಯಗೊಂಡಿದ್ದರೂ ಕೂಡಲೇ ಎದ್ದು ಮಗನನ್ನು ಸಾವಿನ ದವಡೆಯಿಂದ ರಕ್ಷಿಸಿದ್ದಾರೆ.

ಈ ಭೀಕರ ಘಟನೆಯಲ್ಲಿ ತಂದೆ-ಮಗ ಇಬ್ಬರಿಗೂ ಗಾಯಗಳಾಗಿವೆಯಾದರೂ, ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಸ್ತುತ, ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಈ ಸಾಹಸಮಯ ದೃಶ್ಯ ಕಂಡ ಜನ ಈ ತಂದೆಯ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಪಿತೃಪ್ರೇಮಕ್ಕೆ ಸಲಾಂ ಎಂದಿದ್ದಾರೆ. ಅಪಾಯದ ಸಮಯದಲ್ಲಿ ಮಗುವನ್ನು ರಕ್ಷಿಸಲು ದೇವದೂತನಂತೆ ಬಂದ ಈ ತಂದೆಯ ನಿಸ್ವಾರ್ಥ ಪ್ರೀತಿ ಈಗ ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿದೆ.

Edited By :
PublicNext

PublicNext

30/04/2026 02:27 pm

Cinque Terre

19.63 K

Cinque Terre

0

ಸಂಬಂಧಿತ ಸುದ್ದಿ