ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒತ್ತಡದ ಬದುಕಿನಲ್ಲಿ ಪೊಲೀಸರಿಗೆ 'ಆರೋಗ್ಯ ಸ್ಪರ್ಶ': ಶಿವಮೊಗ್ಗದಲ್ಲಿ ವಿಶೇಷ ತರಬೇತಿ

ಶಿವಮೊಗ್ಗ : ಸದಾ ಕಾಲ ಒತ್ತಡದ ನಡುವೆ ಕೆಲಸ ನಿರ್ವಹಿಸುವ ಪೊಲೀಸರು, ತಮ್ಮ ಆರೋಗ್ಯ ಜೋಪಾನ ಮಾಡಿಕೊಳ್ಳಬೇಕು. 53ರ ವಯಸ್ಸಿನ ನಂತರ ಪೊಲೀಸರಿಗೆ ನಿರಂತರ ಆರೋಗ್ಯ ತಪಾಸಣೆ ಅಗತ್ಯವಾಗಿದ್ದು, ಕಿಡ್ನಿ ಎಂಬುದು ನಮ್ಮ ದೇಹ ಎಂಬ ಕಾರ್ಖಾನೆಯಲ್ಲಿ ಪ್ರಮುಖ ಅಂಗವಾಗಿದ್ದು, ನಮ್ಮ ದೇಹದಲ್ಲಿ ಕಿಡ್ನಿಗೆ ಹೆಚ್ಚು ಕೆಲಸವಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ನಿಖಿಲ್ ಬಿ. ಹೇಳಿದರು.

ತೃಪ್ತಿ ಹೆಲ್ತ್ ಕೇರ್ ಆಸ್ಪತ್ರೆ ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸ್ ಸಹಯೋಗದಿಂದ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 53 ವಯಸ್ಸಿನಿಂದ ಮೇಲ್ಪಟ್ಟ ಮಹಿಳಾ ಎಎಸ್‌ಐ, ಎಎಸ್‌ಐ-ಎಆರ್‌ಎಸ್‌ಐ ರವರುಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಾಗಾರದಲ್ಲಿ ಉಚಿತ ಆರೋಗ್ಯ ತಪಾಸಣೆ, ನಿವೃತ್ತಿ ನಂತರ ಜೀವನ ಶೈಲಿ, ಯೋಗ, ಆರೋಗ್ಯಕರ ಆಹಾರ ಪದ್ಧತಿ,ಪಿಂಚಣಿ ಮೊತ್ತ ಸದುಪಯೋಗ, ಮುಂತಾದ ವಿಷಯಗಳ ಬಗ್ಗೆ ಉಪನ್ಯಾಸ ಮತ್ತು ಚರ್ಚಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

Edited By : PublicNext Desk
Kshetra Samachara

Kshetra Samachara

30/04/2026 06:31 pm

Cinque Terre

280

Cinque Terre

0

ಸಂಬಂಧಿತ ಸುದ್ದಿ