ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಸಂಜೀವಿನಿ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಜೀವಾಮೃತ ಬ್ಯಾಂಕ್ ಸ್ಥಾಪನೆಯಾಗಿದೆ. ನವಜಾತ ಶಿಶುಗಳ ಅಪೌಷ್ಠಿಕತೆ ನಿವಾರಣೆಗೆ ಹುಬ್ಬಳ್ಳಿಯ ಕೆಎಂಸಿ ಆರ್ ಐ ಮಹತ್ತರ ಹೆಜ್ಜೆ ಇಟ್ಟಿದೆ. ನವಜಾತ ಶಿಶುಗಳ ಪೌಷ್ಠಿಕತೆ ಕೊರತೆಯನ್ನ ನೀಗಿಸಲು ಹೊಸ ಪ್ರಯತ್ನಕ್ಕೆ ಮುಂದಾಗಿದೆ.
ರಾಜ್ಯದಲ್ಲೇ ಪ್ರಥಮ ಬಾರಿಗೆ ಜೀವಾಮೃತ ಬ್ಯಾಂಕ್ ಸ್ಥಾಪನೆ ಮಾಡಿದ ಕಿಮ್ಸ್. ತಾಯಂದಿರ ಎದೆಹಾಲು ಸಂಗ್ರಹಿಸಿ ಪೌಷ್ಠಿಕತೆಯಿಂದ ಬಳಲುತ್ತಿರುವ ನವಜಾತ ಶಿಶುಗಳಿಗೆ ಜೀವಾಮೃತ. ಹೌದು.. ಪ್ರತಿ ದಿನವೂ ಎದೆಹಾಲು ದಾನ ಮಾಡುವ ಮೂಲಕ ಬಾಣಂತಿಯರು ಮಾನವೀಯತೆ ಮೆರೆಯುತ್ತಿದ್ದಾರೆ. ಹೆರಿಗೆಯಾದ ಕ್ಷಣದಿಂದಲೇ ಎದೆಹಾಲು ದಾನ ಮಾಡುವ ಮೂಲಕ ನವಜಾತ ಶಿಶುಗಳಿಗೆ ಪೌಷ್ಠಿಕತೆಯ ಕೊರತೆಯನ್ನು ನೀಗಿಸುವಲ್ಲಿ ಬಹುತೇಕ ತಾಯಂದಿರು ಕೈ ಜೋಡಿಸಿದ್ದಾರೆ. ನವಜಾತ ಹಸುಗೂಸುಗಳಿಗೆ ರೋಗ ನಿರೋಧಕ ಶಕ್ತಿ ವೃದ್ಧಿ ಹಾಗೂ ಪೌಷ್ಠಿಕಾಂಶ ಪಡೆಯಲು ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ.
ಇನ್ನೂ ಜೀವಾಮೃತ ಬ್ಯಾಂಕ್ ಸ್ಥಾಪನೆಯಾದಾಗಿನಿಂದ ಈವರೆಗೂ 7147 ಕ್ಕೂ ಅಧಿಕ ಬಾಣಂತಿಯರಿಂದ ಎದೆಹಾಲು ದಾನ ಮಾಡಿದ್ದಾರೆ. ತಾಯಂದಿರ ಎದೆ ಹಾಲಿನ ಮೂಲಕ 3 ಸಾವಿರಕ್ಕೂ ಅಧಿಕ ಹಸುಗೂಸುಗಳಿಗೆ ಮಾತೃಸ್ಪರ್ಶ ನೀಡಿದಂತಾಗುತ್ತದೆ. ರಾಜ್ಯದ ಮೊದಲನೇ ಜೀವಾಮೃತ ಬ್ಯಾಂಕ್ ಸ್ಥಾಪನೆ ಮಾಡುವ ಮೂಲಕ ಶಿಶುಗಳಿಗೆ ಮಾತೃಸ್ಪರ್ಶ ನೀಡಿದ ಕಿಮ್ಸ್ ಕಾರ್ಯಕ್ಕೆ ಜನಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/05/2026 12:57 pm
LOADING...