ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಕ್ತದ ಕೊರತೆ ನೀಗಿಸಲು ರಕ್ತದಾನ ಶಿಬಿರ - 75 ಯೂನಿಟ್ ಸಂಗ್ರಹ, 175 ರೋಗಿಗಳಿಗೆ ಅನುಕೂಲ

ಹುಬ್ಬಳ್ಳಿ: ಎಲ್ಲೆಡೆಯೂ ಬಿಸಿಲಿನ ತಾಪಮಾನದಿಂದ ರಕ್ತದ ಅಭಾವ ಹೆಚ್ಚುತ್ತಿದೆ. ಅದೆಷ್ಟೋ ರಕ್ತದಾನಿಗಳು ರಕ್ತದಾನದಿಂದ ದೂರ ಉಳಿಯುತ್ತಿದ್ದು, ಆತಂಕದ ಅಲೆಯಿಂದ ರಕ್ತದ ಕೊರತೆ ಎದುರಾಗುತ್ತಿದೆ. ಈ ನಿಟ್ಟಿನಲ್ಲಿ ಕಿಮ್ಸ್ ಬ್ಲಡ್ ಬ್ಯಾಂಕ್ ವಿಶೇಷ ಶಿಬಿರಗಳನ್ನು ಮಾಡುವ ಮೂಲಕ ರಕ್ತದ ಸಂಗ್ರಹ ಕಾರ್ಯಕ್ಕೆ ಮುಂದಾಗಿದೆ.

ಹುಬ್ಬಳ್ಳಿ 2020ರ Adhirathas ಇಂಟರ್ನ್ ಬ್ಯಾಚ್ ಆಯೋಜಿಸಿದ ರಕ್ತದಾನ ಶಿಬಿರದಲ್ಲಿ 75 ಯೂನಿಟ್ ರಕ್ತ ಸಂಗ್ರಹವಾಗಿದ್ದು, ಸುಮಾರು 175 ರೋಗಿಗಳಿಗೆ ಜೀವದಾನವಾಗುವ ಸಾಧ್ಯತೆ ಇದೆ. ಹೌದು.. ಶಿವರಾಜ್ ಅರಕೇರಿಯವರ ಸ್ಮರಣಾರ್ಥ ಈ ಶಿಬಿರವನ್ನು ನಡೆಸಿದ್ದು, ಇಂತಹದೊಂದು ಕಾರ್ಯಕ್ರಮಕ್ಕೆ ಕಿಮ್ಸ್ ನಿರ್ದೇಶಕರಾದ ಡಾ.ಈಶ್ವರ ಹೊಸಮನಿ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಇನ್ನೂ ರಕ್ತದಾನ ಶಿಬಿರ ಅತ್ಯಂತ ಭಾವನಾತ್ಮಕ ಮತ್ತು ಅರ್ಥಪೂರ್ಣವಾಗಿದೆ. ದುಃಖವನ್ನು ಸಮಾಜ ಸೇವೆಯಾಗಿ ರೂಪಾಂತರಿಸಿದ ಈ ಯುವ ವೈದ್ಯರ ಮಾನವೀಯತೆ ನಿಜಕ್ಕೂ ಶ್ಲಾಘನೀಯವಾಗಿದ್ದು, ಕಿಮ್ಸ್ ರಕ್ತ ಭಂಡಾರದ ವೈದ್ಯರಾದ ಡಾ. ಕವಿತಾ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆದಿದೆ.

ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/05/2026 05:00 pm

Cinque Terre

18.83 K

Cinque Terre

0

ಸಂಬಂಧಿತ ಸುದ್ದಿ